Monday, November 25, 2024
Monday, November 25, 2024

ಉತ್ತಮ ಚಲನಚಿತ್ರವನ್ನು ಮಾಡಲು ಬದುಕಿನ ಅವಲೋಕನ ಸಹಕಾರಿ: ದಿನೇಶ್ ಶೆಣೈ

ಉತ್ತಮ ಚಲನಚಿತ್ರವನ್ನು ಮಾಡಲು ಬದುಕಿನ ಅವಲೋಕನ ಸಹಕಾರಿ: ದಿನೇಶ್ ಶೆಣೈ

Date:

ಮಣಿಪಾಲ: ಬದುಕನ್ನು ಅವಲೋಕಿಸುವುದು ಮತ್ತು ವೈವಿಧ್ಯಮಯ ಚಲನಚಿತ್ರಗಳನ್ನು ನೋಡುವುದು ಉತ್ತಮ ಚಲನಚಿತ್ರವನ್ನು ಮಾಡಲು ಸಹಾಯ ಮಾಡುತ್ತದೆ ಎಂದು ಬರಹಗಾರ ಮತ್ತು ನಿರ್ದೇಶಕ ದಿನೇಶ್ ಶೆಣೈ ಹೇಳಿದರು. ಅವರು ಮಾಹೆಯಲ್ಲಿ ನಡೆದ ತಮ್ಮ ಚೊಚ್ಚಲ ಚಲನಚಿತ್ರ ‘ಮಧ್ಯಂತರ’ ಪ್ರದರ್ಶನದ ನಂತರ ಮಾತನಾಡುತ್ತಿದ್ದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇದೇ ಪರಿಸರದಲ್ಲಿ ಬೆಳೆದ, ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಶೆಣೈ ಅವರು ಮಧ್ಯಂತರದಲ್ಲಿನ ಹೆಚ್ಚಿನ ವಿವರಗಳು ಸಿನಿಮಾದೊಂದಿಗಿನ ಅವರ ಎರಡು ದಶಕಗಳಿಗೂ ಹೆಚ್ಚಿನ ಒಡನಾಟದ ಸಮಯದಲ್ಲಿನ ಅವಲೋಕನ ಮತ್ತು ಅನುಭವದಿಂದ ಜನಿಸಿದವುಗಳಾಗಿವೆ ಎಂದರು.

ತಮ್ಮ ಬಾಲ್ಯದ ದಿನಗಳಿಂದಲೂ ಸಿನಿಮಾದ ಮೇಲಿನ ಉತ್ಸಾಹವನ್ನು ನೆನಪಿಸಿಕೊಂಡ ಅವರು ಈ ಚಿತ್ರ ಮಾಡಲು ಅದು ಹೇಗೆ ಸ್ಫೂರ್ತಿ ನೀಡಿತು ಎಂದು ಸ್ಮರಿಸಿದರು. ಶೆಣೈ ಅವರು ಈ ಹಿಂದೆ ವೆಸ್ ಆಂಡರ್ಸನ್, ಆಡ್ರಿಯನ್ ಬ್ರಾಡಿ, ಮೊಹ್ಸೆನ್ ಮಖ್ಮಲ್ಬಾಫ್, ಅಮೀರ್ ಖಾನ್, ಅಶುತೋಷ್ ಗೋವಾರಿಕರ್ ಅಂತಹ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ.

ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ ಎನ್ನುತ್ತಾ ಚಿತ್ರದ ಲೈಟಿಂಗ್, ಸೆಟ್, ಡಿಸೈನ್, ತಾರಾಗಣದ ಆಯ್ಕೆ, ಲೊಕೇಶನ್ ಹೀಗೆ ನಾನಾ ತಾಂತ್ರಿಕತೆಗಳನ್ನು ವಿವರಿಸಿದರು. ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯ ಕುರಿತಾದ ಕಿರುಚಿತ್ರವಾಗಿರುವ ‘ಮಧ್ಯಂತರ’ ವಿದ್ಯಾರ್ಥಿಗಳು ಮತ್ತು ಇತರರ ಮೆಚ್ಚುಗೆಗೆ ಪಾತ್ರವಾಯಿತು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮತ್ತು ಪತ್ರಕರ್ತ ಜಿ.ವಿಷ್ಣು ಸಂವಾದವನ್ನು ನಿರ್ವಹಿಸಿದರು. ಜಿಸಿಪಿಎಎಸ್ ಫಿಲ್ಮ್ ಕ್ಲಬ್ ಸಂಯೋಜಕರಾದ ಸಂಪದ ಭಾಗವತ್, ಶ್ರವಣ್ ಬಾಸ್ರಿ, ಆಲಿಸ್ ಚೌಹಾಣ್ ಕಾರ್ಯಕ್ರಮ ಆಯೋಜಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!