ಉಪ್ಪೂರು: ಸರಕಾರಿ ಪ್ರೌಢಶಾಲೆ ಉಪ್ಪೂರಿನಲ್ಲಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಮಾರೋಪ ಭಾಷಣವನ್ನು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್, ಮುಂಬರುವ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಎನ್.ಎಸ್.ಎಸ್ ಗೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಬರಲಿದೆ ಎಂದರು.
ಶಿಬಿರಾಧಿಕಾರಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಿರಿಜಾ ಹೆಗಡೆ ಮಾತನಾಡಿ, ಶಿಬಿರದ ಪ್ರಾಮುಖ್ಯತೆ ಮತ್ತು ದಾನಿಗಳ ಕೊಡುಗೆಯನ್ನು ಸ್ಮರಿಸಿದರು. ಶಿಕ್ಷಣ ಸೇವಾ ಸಮಿತಿಯ ಅಧ್ಯಕ್ಷರಾದ ಲತಾ ರಾವ್, ಖಜಾಂಜಿ ಜಯೇಶ್ ಕಾಮತ್, ಸದಸ್ಯರಾದ ಸುಚೇತಾ, ರೋಟರಿ ಕಲ್ಯಾಣಪುರ ಇದರ ಮಾಜಿ ಅಧ್ಯಕ್ಷರಾದ ವಿಜಯ್ ಮಾಯಾಡಿ, ಎನ್ ಎಸ್ ಎಸ್ ನಾಯಕಿ ಪೃಥ್ವಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಸುಧಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಬಿರದ ವರದಿಯನ್ನು ಮಂಜುಳಾ ಮಂಡಿಸಿದರು. ವಿಜಯಲಕ್ಷ್ಮೀ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಯೋಗ ಶಿಕ್ಷಕ ಸಂಜೀವ ಮತ್ತು ಬಾಣಸಿಗ ಮುಖ್ಯಪ್ರಾಣ ಭಟ್ ಇವರನ್ನು ಸನ್ಮಾನಿಸಲಾಯಿತು.