ಕಾರ್ಕಳ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮಗಾಂಧಿಯವರ 153ನೇ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ 118ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅದ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಕಾರ್ಕಳ ಜ್ಞಾನಸಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರ್, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್.ಯು., ಉಪಪ್ರಾಂಶುಪಾಲೆ ವಾಣಿ ಜಯಶೀಲ್, ಸಂಸ್ಥೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ.ಜಿ., ಡೀನ್ ಶಕುಂತಳಾ.ಎಂ. ಸುವರ್ಣ, ಸಂಸ್ಥೆಯ ಹಿತೈಷಿ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಸಾಲ್ಮರದ ಸುರಕ್ಷಾ ಸೇವಾಶ್ರಮ ಹಾಗೂ ಕುಕ್ಕುಂದೂರಿನ ವಿಜೇತ ವಿಶೇಷ ಮಕ್ಕಳ ಶಾಲೆಗೆ ಭೇಟಿ ಕೊಟ್ಟು ಹಣ್ಣುಹಂಪಲು ವಿತರಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಡೀನ್ ಶಕುಂತಳಾ ಎಂ. ಸುವರ್ಣ, ಉಪನ್ಯಾಸಕಿಯರಾದ ಸಂಗೀತ ಕುಲಾಲ್, ಶಮಿತಾ, ಉಪನ್ಯಾಸಕರಾದ ಸುದರ್ಶನ್ ಮೂಲ್ಯ, ಶಿಕ್ಷಕಿಯರಾದ ಶಿಲ್ಪಾ, ಗಾಯತ್ರಿ, ದೈಹಿಕ ಶಿಕ್ಷಕ ಕಿರಣ್, ಸೇವಪಾಲಕ ಅಜಯ್, ಚಂದ್ರಶೇಖರ್ ಉಪಸ್ಥಿತರಿದ್ದರು. ಸಂಸ್ಥೆಯ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.