ಕೋಟ: ಗೀತಾನಂದ ಫೌಂಡೇಶನ್ ಮತ್ತು ಜನತಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಸ್ಪೂರ್ತಿ ಕಾರ್ಯಕ್ರಮದಲ್ಲಿ ಬ್ರಹತ್ ಸ್ವಚ್ಛತಾ ಅಭಿಯಾನಯವನ್ನು ಫಿಶರಿಸ್ ರಸ್ತೆ ಕೋಟದಿಂದ ಪಡುಕರೆಯವರೆಗೂ ಹಮ್ಮಿಕೊಳ್ಳಲಾಯಿತು.
ಸುಮಾರು 60 ಚೀಲಗಳಷ್ಟು ಕಸವನ್ನು ಸಂಗ್ರಹಿಸಲಾಯಿತು. ನಂತರ ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಸಿಬ್ಬಂದಿಗಳನ್ನು ಉದ್ದೇಶಿಸಿ ಈ ಕಾರ್ಯಕ್ರಮವು ಮಾದರಿಯಾದ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯರಲ್ಲಿ ತಮ್ಮ ಕಸದ ಜವಾಬ್ದಾರಿ ತಾವೇ ಎನ್ನುವ ಭಾವನೆ ಮೂಡುತ್ತದೆ ಮತ್ತು ಇದರಿಂದ ನಮ್ಮೂರು ಸ್ವಚ್ಛವಾಗುತ್ತದೆ ಎಂದರು.
ಕೋಟ ಪಂಚಾಯತ್ ಅಧ್ಯಕ್ಷರಾದ ಅಜಿತ್ ದೇವಾಡಿಗ, ಸದಸ್ಯರಾದ ಪಾಂಡು, ಕೋಟತಟ್ಟು ಪಂಚಾಯತ್ ಸದಸ್ಯರಾದ ಸತೀಶ್ ಬಾರಿಕೆರೆ, ಪ್ರಮೋದ್ ಹಂದೆ, ಸಾಹಿರಾ ಮತ್ತು ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ ಮತ್ತು ಜನತಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.