ಕೊಡವೂರು: ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೊಡವೂರು ಮತ್ತು ವಾರ್ಡ್ ಅಭಿವೃದ್ದಿ ಸಮಿತಿ ಕೊಡವೂರು ವತಿಯಿಂದ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಮತ್ತು ವಯಸ್ಸಾದವರಿಗೆ, ನಡೆಯಲು ಸಾಧ್ಯವಿಲ್ಲದವರಿಗೆ ಆರೋಗ್ಯ ಸೇವೆ ಕೊಡುವ ಯೋಜನೆಯ ಭಾಗವಾಗಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಡಾ. ಸುಬ್ರಹ್ಮಣ್ಯ ಶಿರ್ವ ಚಾಲನೆ ನೀಡಿದರು. ನಗರಸಭಾ ಸದಸ್ಯರಾದ ಕೆ. ವಿಜಯ್ ಕೊಡವೂರು, ಡಾ. ಸಾತ್ವಿಕ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಸವಿತಾ ಡಿ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಯುವಕ ಸಂಘ ಕೊಡವೂರು ಅಧ್ಯಕ್ಷರಾದ ಪ್ರಭಾತ್ ಕೊಡವೂರು, ಅಮಿತ್ ಗರ್ಡೆ, ವಿನಯ್ ಮುಂತಾದವರು ಉಪಸ್ಥಿತರಿದ್ದರು.