ಉಡುಪಿ: ಪ್ರತಿವರ್ಷ ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ವೃದ್ಧರ ದಿನವನ್ನು ಆಚರಿಸಲಾಗುತ್ತದೆ. ವಯಸ್ಸಾದವರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಾದ ವೃದ್ಧಾಪ್ಯ ಮತ್ತು ಹಿರಿಯರ ನಿಂದನೆಗಳ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಸಮಾಜಕ್ಕೆ ಹಿರಿಯರು ನೀಡುವ ಕೊಡುಗೆಗಳನ್ನು ಶ್ಲಾಘಿಸುವ ದಿನವೂ ಹೌದು. 2022 ರ ಅಂತಾರಾಷ್ಟ್ರೀಯ ವಯೋವೃದ್ಧರ ದಿನದ ಘೋಷ ವಾಕ್ಯ “ಬದಲಾಗುತ್ತಿರುವ ಜಗತ್ತಿನಲ್ಲಿ ವಯಸ್ಸಾದ ವ್ಯಕ್ತಿಗಳ ಸ್ಥಿತಿಸ್ಥಾಪಕತ್ವ” ಆಗಿದೆ.
ಅಂತರಾಷ್ಟ್ರೀಯ ವಯೋವೃದ್ಧರ ದಿನದ ಅಂಗವಾಗಿ, ಡಾ. ಟಿಎಂಎ ಪೈ ಆಸ್ಪತ್ರೆ, ಉಡುಪಿಯಲ್ಲಿ ಆರೋಗ್ಯವಂತ ವೃದ್ಧಾಪ್ಯ ಅಧ್ಯಯನ ಕೇಂದ್ರ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಣಿಪಾಲದ ಸಹಯೋಗದೊಂದಿಗೆ ಮಣಿಪಾಲವು 1ನೇ ಅಕ್ಟೋಬರ್ 2022 ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಶಿಬಿರ ನಡೆಯಲಿದೆ.
ಹಿರಿಯ ವಯಸ್ಕರಿಗೆ ಸ್ಕ್ರೀನಿಂಗ್ ಶಿಬಿರವನ್ನು ಆಯೋಜಿಸಿದೆ. 1ನೇ ಮಹಡಿ, ಹೊರರೋಗಿ ವಿಭಾಗದಲ್ಲಿ ದೃಷ್ಟಿ, ಶ್ರವಣ, ಅರಿವು, ಮಾನಸಿಕ ಆರೋಗ್ಯ, ಬೀಳುವ ಅಪಾಯ, ಮಧುಮೇಹ ಪಾದ ತಪಾಸಣೆ, ದೈಹಿಕ ಸಾಮರ್ಥ್ಯ ಮತ್ತು ಕ್ರಿಯಾತ್ಮಕ ಸಾಮರ್ಥ್ಯಗಳ ತಪಾಸಣೆ ನಡೆಸಲಾಗುವುದು.
ವಯೋವೃದ್ಧರು ಈ ತಪಾಸಣಾ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಕೋರಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಸಮಯ ನಿಗದಿಪಡಿಸಲು 916364564541 ಗೆ ಕರೆ ಮಾಡಿ.