ಹಿರಿಯಡ್ಕ: ಅಕ್ಷಯಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಥಮ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಶ್ರೀಕಾಂತ ಕಾಮತ್ ರವರ ಅಧ್ಕಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಯೋಜನೆಗಳ ಬಗ್ಗೆ ಶ್ರೀಕಾಂತ ಕಾಮತ್ ವಿವರಿಸಿ ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಸ್ಥೆಗೆ ಸಹಕಾರ ನೀಡಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು. ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ ನಾಯಕ್ ರವರು 2021 – 22 ನೇ ಸಾಲಿನ ಆಯವ್ಯಯ ಮಂಡಿಸಿದರು. ಸಭೆಯಲ್ಲಿ ಆಯವ್ಯಯವು ಸರ್ವಾನುಮತದಿಂದ ಅಂಗೀಕಾರಗೊಂಡಿತು.
ನಂತರ 2021 2022ನೇ ಸಾಲಿನ ಆಸ್ತಿ ಹಾಗೂ ಜವಾಬ್ದಾರಿ ವಿವರ ಮಂಡಿಸಿದರು. ಇದು ಅಂಗೀಕಾರಗೊಂಡ ನಂತರ 2022 – 23 ನೇ ಸಾಲಿನ ಬಜೆಟ್ ಮಂಡಿಸಿದರು. ಸಭೆಯಲ್ಲಿ ಬಜೆಟ್ ಅಂಗೀಕಾರಗೊಂಡಿತು. ಸಭೆಯಲ್ಲಿ ಪ್ರಗತಿಪರ ಕೃಷಿಕರಾದ ಉಪೇಂದ್ರ ನಾಯಕ್ ಮತ್ತು ತಿಮ್ಮಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಆಸ್ತಿ ಮೌಲ್ಯಮಾಪಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ದ್ವಿತೀಯರಾಗಿರುವ ಅವಿನಾಶ್ ನಾಯಕ್ ಹಿರಿಯಡ್ಕ ಇವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರ ಉಪೇಂದ್ರ ನಾಯಕ್ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೊಸೈಟಿಯ ಅಧ್ಯಕ್ಷರಾದ ಶ್ರೀಕಾಂತ್ ಕಾಮತ್, ಉಪಾಧ್ಯಕ್ಷರಾದ ಗಿರೀಶ್ ಪ್ರಭು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರಾದ ಸುದರ್ಶನ ಪ್ರಭು, ರವೀಂದ್ರ ಪ್ರಭು, ಸಂಧ್ಯಾ ಕಾಮತ್, ಆಶಾ ಕಾಮತ್, ವಿಜಯಲಕ್ಷ್ಮಿ, ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ, ನಿರ್ದೇಶಕರಾದ ರಮಾನಂದ ನಾಯಕ್, ಶಾಂತಾರಾಮ ಸಾಲಂಕಾರ್, ವಿಶ್ವನಾಥ ನಾಯಕ್, ಸುದರ್ಶನ ನಾಯಕ್, ರವೀಂದ್ರ ಕುಮಾರ್ ಪ್ರಭು, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವಿದುಷಿ ಶ್ರಾವ್ಯ ಮತ್ತು ತಂಡದವರಿಂದ ಭರತನಾಟ್ಯ “ನೃತ್ಯಾಕ್ಷಯ” ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು. ಗಿರೀಶ ಪ್ರಭು ಸ್ವಾಗತಿಸಿ, ವಿಜಯಲಕ್ಷ್ಮೀ ವಂದಿಸಿದರು. ರವೀಂದ್ರ ಕುಮಾರ್ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಆಶಾ ಕಾಮತ್ ಪ್ರಾರ್ಥಿಸಿದರು