ಕೊಡವೂರು: ಕೊಡವೂರಿನಲ್ಲಿ ಪ್ರತಿದಿನ ಸ್ವಚ್ಛತೆಯನ್ನು ಕಾಪಾಡುತ್ತಿರುವ ಕಸ ವಿಲೇವಾರಿ ಮಾಡುವ ಉಡುಪಿ ನಗರಸಭೆಯ ವಾಹನ ಚಾಲಕರು ಮತ್ತು ಲೋಡರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಂದೀಪ್, ರಮೇಶ್, ಶಾಮ ಇವರನ್ನು ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕೊಡವೂರಿನ ನಾಗರಿಕರ ಪರವಾಗಿ ಕೊಡವೂರು ಯುವಕ ಸಂಘದಲ್ಲಿ ಗೌರವಿಸಲಾಯಿತು.
ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ರಾಘವೇಂದ್ರ ರಾವ್, ವರ್ಷ ನಾರಾಯಣ್ ರಾವ್, ವಾಣಿ, ವಿನಯ್ ಮುಂತಾದವರು ಉಪಸ್ಥಿತರಿದ್ದರು. ಪ್ರಭಾತ್ ಕೊಡವೂರು ಸ್ವಾಗತಿಸಿ ವಂದಿಸಿದರು.