Thursday, January 23, 2025
Thursday, January 23, 2025

ವಕ್ಫ್ ಮಂಡಳಿ ರದ್ದುಗೊಳಿಸಿ, ರಾಷ್ಟ್ರವಿರೋಧಿ ಪಿ.ಎಫ್.ಐ ನಿಷೇಧಕ್ಕೆ ಸರಕಾರ ಮುಂದಾಗಲಿ: ಯಶ್ಪಾಲ್ ಸುವರ್ಣ ಆಗ್ರಹ

ವಕ್ಫ್ ಮಂಡಳಿ ರದ್ದುಗೊಳಿಸಿ, ರಾಷ್ಟ್ರವಿರೋಧಿ ಪಿ.ಎಫ್.ಐ ನಿಷೇಧಕ್ಕೆ ಸರಕಾರ ಮುಂದಾಗಲಿ: ಯಶ್ಪಾಲ್ ಸುವರ್ಣ ಆಗ್ರಹ

Date:

ಉಡುಪಿ: ವಕ್ಫ್ ಮಂಡಳಿ ಅಕ್ರಮ ಆಸ್ತಿ ಕಬಳಿಕೆ ಮೂಲಕ ರಾಜ್ಯದಾದ್ಯಂತ ಭೂ ಅವ್ಯವಹಾರ ನಡೆಸಿ ಕೋಟ್ಯಂತರ ರೂಪಾಯಿಗಳ ಹಗರಣದ ನಡೆಸಿದ್ದ ಬಗ್ಗೆ 2012 ರಲ್ಲಿ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಆಸ್ತಿಗಳ ಬಗ್ಗೆ ತನಿಖೆ ನಡೆಸಿ ಸರಕಾರದ ವಶಕ್ಕೆ ಪಡೆದು ವಕ್ಫ್ ಮಂಡಳಿಯನ್ನು ರಾಜ್ಯ ಸರಕಾರ ತಕ್ಷಣವೇ ರದ್ದು ಗೊಳಿಸುವಂತೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಗಾಗಿ ವಿಶೇಷ ಆಸಕ್ತಿಯಿಂದ ಅಂದಿನ ಕಾಂಗ್ರೆಸ್ ಸರ್ಕಾರ 1995 ರಲ್ಲಿ ಜಾರಿಗೆ ತಂದ ವಕ್ಫ್ ಕಾಯಿದೆ ರಾಜಾರೋಷವಾಗಿ ಅಕ್ರಮ ಭೂ ಕಬಳಿಕೆಗೆ ಪೂರಕವಾಗಿರುವ ಪರಿಣಾಮ ಇಂದು ದೇಶದ ಸೇನೆ ಮತ್ತು ರೈಲ್ವೇ ಇಲಾಖೆಯನ್ನು ಹೊರತು ಪಡಿಸಿ ಅತ್ಯಧಿಕ ಪ್ರಮಾಣದ ಆಸ್ತಿ ಹೊಂದಿರುವ ಸಂಸ್ಥೆ ವಕ್ಫ್ ಮಂಡಳಿಯಾಗಿದೆ.

ತಮಿಳುನಾಡಿನಲ್ಲಿ ದೇವಸ್ಥಾನ ಸಹಿತವಾಗಿ ಇಡೀ ಗ್ರಾಮವನ್ನೇ ವಕ್ಫ್ ಮಂಡಳಿ ತನ್ನ ಆಸ್ತಿ ಎಂದು ಘೋಷಿಸಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಉಡುಪಿಯ ಕೊಡವೂರು ಜುಮಾದಿ ನಗರ ಮತ್ತು ರಾಜ್ಯದ ವಿವಿಧೆಡೆ ಇಂತಹ ಪ್ರಕರಣಗಳ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸುವ ಅವಶ್ಯಕತೆಯಿದ್ದು, ಈ ಮೂಲಕ ಮತೀಯವಾದಿ ರಾಷ್ಟ್ರವಿರೋಧಿ ಸಂಘಟನೆಗಳ ಚಟವಟಿಕೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ.

ರಾಜ್ಯದಲ್ಲಿ ಮತೀಯವಾದಿ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳು ಹಿಜಾಬ್ ವಿವಾದವನ್ನು ಸೃಷ್ಟಿಸಿ ಬಡ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಕಸಿಯಲು ಯತ್ನಿಸಿ, ಹೈ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಬಂದ್ ಕರೆ ನೀಡಿ ನ್ಯಾಯಾಂಗ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡಿದ್ದಾರೆ. ಮುಸ್ಲಿಂ ರಾಷ್ಟ್ರ ಇರಾನ್ ನಲ್ಲಿ ಹಿಜಾಬ್ ವಿರೋಧಿಸಿ ಮಹಿಳೆಯರು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಹಿಜಾಬ್ ವಿಚಾರವನ್ನು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ.

ಶಿವಮೊಗ್ಗದಲ್ಲಿ ಬಂಧಿತ ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತ ಉಗ್ರಗಾಮಿಗಳಲ್ಲಿ ಓರ್ವ ಈ ಹಿಂದೆ ಮಂಗಳೂರಿನಲ್ಲಿ ಪ್ರಚೋದನಾತ್ಮಕ ಗೋಡೆ ಬರಹದ ಆರೋಪಿಯಾಗಿದ್ದು, ಈ ಮೂಲಭೂತವಾದಿಗಳಿಗೆ ಪರೋಕ್ಷವಾಗಿ ವಕ್ಫ್ ಮಂಡಳಿಯ ಅಕ್ರಮ ಹಗರಣಗಳ ಹಣದ ಸಹಕಾರ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ದೇಶದಾದ್ಯಂತ ಎನ್.ಐ.ಎ ನಡೆಸುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ನಿಯಂತ್ರಣಕ್ಕೆ ನಡೆಸುತ್ತಿರುವ ತನಿಖೆಗೂ ಅಡ್ಡಿ ಮಾಡುವ ಮೂಲಕ ಉದ್ದಟತನ ಮೆರೆಯುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ದೇಶದಾದ್ಯಂತ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿ, ಎಸ್ ಡಿ ಪಿ ಐ, ಪಿ ಎಫ್ ಐ ನಂತಹ ಐಸಿಸ್ ಮನಸ್ಥಿತಿಯ ರಾಷ್ಟ್ರವಿರೋಧಿ ಮತೀಯ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸುವುದಾಗಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!