Tuesday, January 21, 2025
Tuesday, January 21, 2025

ಉಡುಪಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ

ಉಡುಪಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ

Date:

ಉಡುಪಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ 226ನೇ ರಾಯಣ್ಣನವರ ಜಯಂತ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ಉಡುಪಿಯ ಪ್ರಮುಖ ವೃತ್ತವಾದ ನರ್ಮ್ ಬಸ್ ನಿಲ್ದಾಣದ ಹತ್ತಿರ ಪುಷ್ಪ ಬೇಕರಿಯ ಎದುರುಗಡೆ ಇರುವ ವೃತ್ತಕ್ಕೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವ್ರತ್ತ ಎಂದು ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರ ಸತತ ಪ್ರಯತ್ನಕ್ಕೆ ಇವತ್ತು ಪ್ರತಿಫಲ ಸಿಕ್ಕಂತಾಗಿದೆ. ನಮಗೂ ವ್ರತ್ತಕ್ಕೆ ನಾಮಕರಣ ಮಾಡುವ ಬಗ್ಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಜನ್ಮದಿನವನ್ನು ಸರಕಾರಿ ಮಟ್ಟದಲ್ಲಿ ಕಾರ್ಯಕ್ರಮವನ್ನು ಮಾಡುವವರಿದ್ದೇವೆ, ಆ ಕಾರ್ಯಕ್ರಮದ ನೇತೃತ್ವವನ್ನು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ವಹಿಸಿಕೊಳ್ಳಬೇಕು ಎಂದರು.

ಸಭಾ ಕಾರ್ಯಕ್ರಮದ ಮೊದಲು 226ನೇ ರಾಯಣ್ಣ ಜಯಂತಿಯ ಕುಂಭ ಮೆರವಣಿಗೆಯು ನಗರದ ನರ್ಮ್ ಬಸ್ ನಿಲ್ದಾಣದಿಂದ ಅದ್ದೂರಿ ಚಾಲನೆಯಿಂದ ಆರಂಭಗೊಂಡಿತು, ಮೆರವಣಿಗೆಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಹಫೀಜ್ ರೆಹಮಾನ್ ರಾಯಣ್ಣ ನ ಭಾವಚಿತ್ರಕ್ಕೆ ಪುಷ್ಪ ನಮನಗೈದು ಚಾಲನೆ ನೀಡಿದರು.

ರೋಟರಿ ರಾಯಲ್ ಉಡುಪಿಯ ಜಿಲ್ಲಾಧ್ಯಕ್ಷ ಡಾ. ಬಾಲಕೃಷ್ಣ ಮದ್ದೋಡಿ, ಸಂಗೊಳ್ಳಿ ರಾಯಣ್ಣರಂತಹ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳು ಇನ್ನೂ ಉನ್ನತ ಮಟ್ಟದಲ್ಲಿ ಆಗಬೇಕು ಮತ್ತು ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರಂತಹ ಯುವ ನಾಯಕರು ನಮ್ಮ ಸಮಾಜದಲ್ಲಿ ಇಂತಹ ಕೆಲಸ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಮನೆಯ ಅಜ್ಜ ಮುತ್ತಜ್ಜನ ಹೆಸರನ್ನೇ ನೆನಪಿಡದ ಈ ಕಾಲಘಟ್ಟದಲ್ಲಿ 226 ವರ್ಷಗಳ ಹಿಂದೆ ಒಂದು ಮಹಾನ್ ಚೇತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಂತಹ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರೆ ಸಂಗೊಳ್ಳಿ ರಾಯಣ್ಣರ ಸಾಹಸ ಶೌರ್ಯ ಬ್ರಿಟಿಷರ ವಿರುದ್ಧ ಮಾಡಿದ ಯುದ್ಧ ಎಂತಹ ಮಹಾನ್ ಕೆಲಸ ಆಗಿರಬೇಕು ಎಂದರು.

ನಿವೃತ್ತ ಯೋಧರಾದ ವಾಗನೆಪ್ಪ ಯೆಲಮೇಲ, ಹಾಲುಮತ ಮಹಾಸಭಾ ಜಿಲ್ಲೆಯ ಗೌರವಾಧ್ಯಕ್ಷರಾದ ಪ್ರಭುದೇವ್ ಮಾನೆ, ಹಾಲುಮತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಜಿ ಗೋಡಿ, ಉಡುಪಿ ನಗರಸಭೆಯ ಸದಸ್ಯರಾದ ವಿಜಯ್ ಕೊಡವೂರು, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರಾದ ಜಯರಾಮ್ ಅಂಬೆಕಲ್ಲು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ರಾಯಣ್ಣ ಅಭಿಮಾನಿ ಬಳಗದ ಮಾರ್ಗದರ್ಶಕರಾದ ತಿಪ್ಪಣ್ಣ ಬಿ. ಚಿಮ್ಮನಕಟ್ಟಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಇಲಕಲ್ ತಾಲೂಕು ಅಧ್ಯಕ್ಷರಾದ ಶಶಿಕಾಂತ್ ಯ ಗುರಿಕಾರ್, ರಾಯಣ್ಣ ಅಭಿಮಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆಯ ಮಂಜುನಾಥ್ ಆರ್ ನೋಟಗಾರ, ಸುಮಂಗಲ ಸ್ಟೋರ್ಸ್ ಪರ್ಕಳ ಇದರ ಮಾಲಕರಾದ ಪ್ರಕಾಶ್ ಶೆಣೈ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ತಾಲೂಕ್ ಅಧ್ಯಕ್ಷರಾದ ಲಕ್ಷ್ಮಣ ಕೋಲ್ಕಾರ್ ಉಪಸ್ಥಿತರಿದ್ದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾದ ಈರಪ್ಪ ಗೌಂಡಿ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!