ಕುಂದಾಪುರ: ಜೇಸಿಐ ಶಂಕರನಾರಾಯಣ ಇದರ ಜೇಸಿ ಸಪ್ತಾಹದ 2ನೇ ದಿನದ ಸಪ್ತಾಹ ಸಮಾರಂಭವು ಶಂಕರನಾರಾಯಣದ ಜಿ. ಎಸ್. ಆಚಾರ್ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಆಗಮಿಸಿ ಜೇಸಿ ಸಂಸ್ಥೆ ತಾವು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ ಸಂಸ್ಥೆಯಾಗಿದ್ದು, ವ್ಯಕ್ತಿತ್ವ ವಿಕಸನದ ಮೂಲವೇ ಜೇಸಿ ಸಂಸ್ಥೆಯಾಗಿದ್ದು, ಎಲ್ಲರೂ ಜೇಸಿ ಆಂದೋಲನಕ್ಕೆ ಕೈ ಜೋಡಿಸಿ ಎಂದರು.
ವಲಯ 15ರ ಪೂರ್ವ ವಲಯಾಧ್ಯಕ್ಷ ಪಿ.ಪಿ.ಪಿ ಶ್ರೀಧರ ಪಿ. ಎಸ್. ಜೇಸಿ ಸಂಸ್ಥೆ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಏಕೈಕ ಸಂಸ್ಥೆಯಾಗಿದ್ದು, ಎಲ್ಲಾ ಯುವಕರು ಜೇಸಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ವಕೀಲರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಗಣಪತಿ ಶೇಟ್, ಕುಂದನಾಡು ರೈತ ಉತ್ಪಾದನಾ ಕಂಪೆನಿ ವಂಡ್ಸೆ ಹೋಬಳಿ ನಿರ್ದೇಶಕರಾದ ಕೆ. ಸದಾಶಿವ ಶೆಟ್ಟಿ, ಉದ್ಯಮಿಗಳಾದ ಕರುಣಾಕರ ಶೆಟ್ಟಿ ಗೋಳಿಯಂಗಡಿ, ವಿಭಾಗೀಯ ವಲಯ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಶಾಡಿಗುಂಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ವಲಯ 15ರ ವಲಯಾಧಿಕಾರಿ ಜೆ ಎಫ್ ಎಮ್ ರತೀಶ್ ಕನ್ನಂತ, ಕಾರ್ಯದರ್ಶಿ ಪ್ರವೀಣ ನಾಯ್ಕ ಬಾಳೆಕೊಡ್ಲು, ಸಪ್ತಾಹ ಸಭಾಪತಿ ಕೆ. ಉದಯ ರಾವ್, ಮಹಿಳಾ ಜೇಸಿ ಅಧ್ಯಕ್ಷೆ ಚೈತ್ರಾ ಪಿ ಶೆಟ್ಟಿ, ಕಾರ್ಯಕ್ರಮ ನಿರ್ವಾಹಕರಾದ ಉದಯ ಎಳ್ಮಣ್ಣು, ಸರ್ವೋತ್ತಮ ಶೆಟ್ಟಿ, ಜೆ.ಜೆ.ಸಿ. ಅಧ್ಯಕ್ಷೆ ನಿಶ್ಮಿತಾ ತಲ್ಲಂಜೆ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಸರಕಾರಿ ಪ್ರೌಢಶಾಲೆ ಸಿದ್ಧಾಪುರದ ವೈಷ್ಣವಿ ಹಾಗೂ ಕೆ.ಇ.ಬಿ ಯಲ್ಲಿ ಮಾನ್ಸೂನ್ ಗ್ಯಾಂಗ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯ ಲಂಬೋದರಿ, ರಾಜಮಣಿ ಕಾರೇಬೈಲು, ರಮೇಶ ಭಟ್ ಕುಳ್ಳಂಜೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಲ್ಲವಿ ಪ್ರವೀಣ್ ಬಾಳೆಕೊಡ್ಲು ಜೇಸಿ ವಾಣಿ ವಾಚಿಸಿದರು.
ರಾಘವೇಂದ್ರ ಶೇಟ್, ರಾಘವೇಂದ್ರ ಶೆಟ್ಟಿ ಹೆಬ್ಬಾಡಿ, ಪೂರ್ಣಿಮಾ ಉದಯ ರಾವ್ ಹಾಗೂ ರಾಘವೇಂದ್ರ ಚಾತ್ರಮಕ್ಕಿ ಸನ್ಮಾನಿತರನ್ನು ಪರಿಚಯಿಸಿದರು. ಯೋಗೀಶ್ ಕಾಂಚನ್, ರಾಜೇಶ್ ಆಚಾರ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಘಟಕಾಧ್ಯಕ್ಷ ಪ್ರಶಾಂತ್ ಶೆಟ್ಟಿ ಶಾಡಿಗುಂಡಿ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ ನಾಯ್ಕ ಬಾಳೆಕೊಡ್ಲು ವಂದಿಸಿದರು.