ಉಡುಪಿ: ಉಡುಪಿ ಜ್ಞಾನಸುಧಾ-ನಾಗಬನ ಕ್ಯಾಂಪಸ್, ಕಡಿಯಾಳಿ ಇಲ್ಲಿ ನೀಟ್ 2023 ಲಾಂಗ್ ಟರ್ಮ್ ತರಬೇತಿ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀಟ್-2022ರಲ್ಲಿ 450ಕ್ಕಿಂತ ಹೆಚ್ಚು ಅಂಕ ಪಡೆದಿದ್ದು ನೀಟ್-2023 ಬರೆಯುವ ಆಸಕ್ತ ವಿದ್ಯಾರ್ಥಿಗಳು ನೀಟ್ ಲಾಂಗ್ ಟರ್ಮ್ ಉಚಿತ ತರಬೇತಿಗೆ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನೀಟ್ 2022ರಲ್ಲಿ 19 ವಿದ್ಯಾರ್ಥಿಗಳು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಮೂಲಕ ಉಡುಪಿ ಜ್ಞಾನಸುಧಾದಲ್ಲಿ ನೀಟ್ ಲಾಂಗ್ ಟರ್ಮ್‌ಗೆ ದಾಖಲಾತಿ ಹೊಂದಿದ್ದರು. ಇದರಲ್ಲಿ 10 ವಿದ್ಯಾರ್ಥಿಗಳು ಉಚಿತ ಶಿಕ್ಷಣದಡಿ ವ್ಯಾಸಂಗ ಮಾಡಿದ್ದರು. 2 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಗಳಿಸಿದ್ದು, ಅನಿರುದ್ದ್ ಭಟ್ 640 ಅಂಕದೊಂದಿಗೆ 99.60 ಪರ್ಸಂಟೈಲ್, ದಿಶಾ .ಆರ್. ಶೆಟ್ಟಿ 604 ಅಂಕಗಳೊಂದಿಗೆ 98.90 ಪರ್ಸಂಟೈಲ್ ಗಳಿಸಿದ್ದಾರೆ.
10 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದು, ಶರೋನ್ ರಿಶಾಂತ್ ರಾಡ್ರಿಗಸ್ (592), ಆಶ್ರಿತ್ ಶೆಟ್ಟಿ (591), ವೇದಾ ಯು.ಜಿ.(589), ಲಹರಿ (587), ಎಸ್. ತುಳಸಿ.ರಾವ್ (581), ಪ್ರತೀಕ್.ಎಸ್ (581), ಸಮೀಕ್ಷಾ ಎಸ್ ಎ (548), ಸೂರ್ಯಕಾಂತ್ (535) ಉತ್ತಮ ಅಂಕ ಪಡೆದು ಕೊಂಡು ಸಂಸ್ಥೆ ಮೊದಲ ವರ್ಷದಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿಕೊಂಡ ಹಿರಿಮೆಗೆ ಪಾತ್ರವಾಗಿದೆ.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರ ದಕ್ಷ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಬರುತ್ತಿದೆ. ವೈದ್ಯಕೀಯ ರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ನೀಟ್ ಹಾಗೂ ಇಂಜಿನಿಯರಿಂಗ್ ಪ್ರವೇಶಾತಿಗೆ ರಾಜ್ಯಮಟ್ಟದಲ್ಲಿ ಕೆಸಿಇಟಿ ಹಾಗೂ ರಾಷ್ಟ್ರಮಟ್ಟದಲ್ಲಿ ಜೆಇಇ ಹಾಗೂ ಕೆವಿಪಿವೈಗಳಿಗೆ ತರಬೇತಿಯನ್ನು ನೀಡಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜ್ಞಾನಸುಧಾ ಅಭಿಮಾನಿ ಪೋಷಕರ ಕೋರಿಕೆ ಮತ್ತು ಬೇಡಿಕೆಯ ಮೇರೆಗೆ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ಮತ್ತು ಸಂಸ್ಥಾಪಕರ ಜನ್ಮಶತಾಬ್ದಿಯ ಸವಿ ನೆನಪಿನಲ್ಲಿ ಉಡುಪಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕಡಿಯಾಳಿಯಲ್ಲಿ ಉಡುಪಿ ಜ್ಞಾನಸುಧಾ ಪಿ.ಯು ಕಾಲೇಜ್ 2021-22 ಶೈಕ್ಷಣಿಕ ವರ್ಷದಿಂದ ಕಾರ್ಯಚರಿಸುತ್ತಿದೆ. ಸಂಪರ್ಕ ಸಂಖ್ಯೆ : 8277820909, 9008977984.