Friday, January 24, 2025
Friday, January 24, 2025

ಸಮೃದ್ಧಿ ಯುವಕ ಮಂಡಲ- ಬೀಳ್ಕೊಡುಗೆ ಕಾರ್ಯಕ್ರಮ

ಸಮೃದ್ಧಿ ಯುವಕ ಮಂಡಲ- ಬೀಳ್ಕೊಡುಗೆ ಕಾರ್ಯಕ್ರಮ

Date:

ಉಡುಪಿ: ಸಮೃದ್ಧಿ ಯುವಕ ಮಂಡಲ(ರಿ) ಕುಳ್ಳಂಜೆ ಶಂಕರನಾರಾಯಣ ಇದರ ವತಿಯಿಂದ ಶಂಕರನಾರಾಯಣ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಉಪನ್ಯಾಸಕ ಈಶ್ವರ ಕೆ.ಟಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಸಮೃದ್ಧಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರಾದ ಯೋಗೀಶ ದೇವಾಡಿಗ ವಹಿಸಿದದ್ದರು. ಈ ಸಂದರ್ಭದಲ್ಲಿ ರಿಲಾಯನ್ಸ್ ಇನ್ಫೋ ಕಮ್ಯುನಿಕೇಶನ್ ಲಿಮಿಟೆಡ್ ಮಂಗಳೂರು ಇವರ ನೆಟ್‌ವರ್ಕ್ ಇಂಜಿನಿಯರ್ ಅವಿನಾಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮೃದ್ಧಿ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೀಪ ಎಳಜೆಡ್ಡು ಸ್ವಾಗತಿಸಿ, ಪೂರ್ವಾಧ್ಯಕ್ಷ ಪ್ರವೀಣ ನಾಯ್ಕ ಬಾಳೆಕೊಡ್ಲು ವಂದಿಸಿದರು. ಉಪಾಧ್ಯಕ್ಷ ನಾರಾಯಣ ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿಮಗೆ ಪ್ಯಾಷನ್ ಇದೆಯೇ?

ಸುಬ್ಬನಿಗೆ ಗಾಯಕನಾಗುವ ಆಸೆ. ಸುಬ್ಬಿಗೆ ನರ್ತಕಿಯಾಗುವ ಆಸೆ. ಆದರೆ ಇಬ್ಬರಲ್ಲಿ ವ್ಯತ್ಯಾಸವಿದೆ....

ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರ್ಯಾಗಾರ

ಉಡುಪಿ, ಜ.23: ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ...
error: Content is protected !!