Thursday, January 23, 2025
Thursday, January 23, 2025

ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ- ಪರೀಕ್ಷಾ ತಯಾರಿ ಕಾರ್ಯಗಾರ

ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ- ಪರೀಕ್ಷಾ ತಯಾರಿ ಕಾರ್ಯಗಾರ

Date:

ಕಲ್ಯಾಣಪುರ: ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕಾರ್ಯಗಾರ ಇಂದು ನಡೆಯಿತು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಂತಿ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಮಾಜಕಾರ್ಯ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್, ಹೆತ್ತವರು ಆರಂಭದಿಂದ ಮಕ್ಕಳ ಜೊತೆಗೆ ಅವರ ಶೈಕ್ಷಣಿಕ ವಿಚಾರದಲ್ಲಿ ಸಹಭಾಗಿತ್ವ ವಹಿಸಿದರೆ ಮಕ್ಕಳ ಸರ್ವತೋಮುಖ ಪ್ರಗತಿ ಸಾಧ್ಯ.

ಪೂರ್ಣಪ್ರಮಾಣದಲ್ಲಿ ಮುಂಚಿತವಾಗಿ ತಯಾರಿ ನಡೆಸಿದರೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಹುದು. ಪ್ರತಿಯೊಬ್ಬರೂ ಸ್ವಾಟ್ ಎನಾಲಿಸಿಸ್ ಮಾಡಿದರೆ ಬಲಿಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.

ಇತರರೊಂದಿಗೆ ಹೋಲಿಕೆ ಮಾಡದೇ, ನಮ್ಮಲ್ಲಿರುವ ಅದಮ್ಯ ಶಕ್ತಿಯ ಬಗ್ಗೆ ವಿಶ್ವಾಸವನ್ನಿಟ್ಟುಕೊಂಡು ಸಮಯ ಹಾಗೂ ಅವಕಾಶಗಳ ಸದ್ಬಳಕೆ ಮಾಡಿದರೆ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಎದುರಾಗುವುದಿಲ್ಲ.

ನಿರಂತರ ಅಧ್ಯಯನ, ವಿಷಯದಲ್ಲಿ ಆಸಕ್ತಿ, ಕಲಿಕೆಯಲ್ಲಿ ನಿಷ್ಠೆ ಹಾಗೂ ಸ್ಪಷ್ಟ ಗುರಿಗಳನ್ನು ಇಟ್ಟುಕೊಂಡರೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಹೇಳಿದರು.

ಹಿರಿಯ ಶಿಕ್ಷಕ ನೆಲ್ಸನ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಶಾಂತ್ ಲೋಪೆಜ಼್, ಬೋಧಕ ಬೋಧಕೇತರರು, ಪೋಷಕರು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!