ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 21 ನೇ ವಾರ್ಷಿಕ ಮಹಾಸಭೆಯು ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
2021-22 ರ ಸಾಲಿನ ಅಂತ್ಯಕ್ಕೆ ಪಾಲು ಬಂಡವಾಳ ರೂ 1.50 ಕೋಟಿ, ನಿಧಿಗಳು ರೂ 8.24 ಕೋಟಿ, ಠೇವಣಿ ರೂ 85.78 ಕೋಟಿ, ಸಾಲಗಳು ರೂ 66.93 ಕೋಟಿ, ಒಟ್ಟು ವ್ಯವಹಾರ 318 ಕೋಟಿ ನಡೆಸಿ ರೂ 1.85 ಕೋಟಿ ನಿವ್ವಳ ಲಾಭ ಗಳಿಸಿ ಶೇ 12% ಲಾಭಾಂಶ ವಿತರಿಸಿತು.
ಸಂಸ್ಥೆಯಿಂದ ದುರ್ಗಾಶ್ರೀ ಸ್ವಸಹಾಯ ಗುಂಪುಗಳನ್ನು ಸರಳೇಬೆಟ್ಟು ರಮಾನಾಥ ನಾಯಕ್ ಉದ್ಘಾಟಿಸಿ ಉಳಿತಾಯ ಹಾಗೂ ಸಾಲ ಪಡೆಯಲು ಸ್ವಸಹಾಯ ಗುಂಪು ರಚಿಸಿರುವುದನ್ನು ಶ್ಲಾಘಿಸಿ ಯೋಜನೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಐ.ಬಿ.ಬಿ.ಐ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ವ್ಯಕ್ತಿ ಹಾಗೂ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಕಿರಿಯ ಪ್ರಾಯದಲ್ಲಿ ಈ ಸಾಧನೆ ಮಾಡಿದ ಅವಿನಾಶ್ ನಾಯಕ್ ಹಿರಿಯಡ್ಕ ಸಂಸ್ಥೆಯ ಆಸ್ತಿ ಮೌಲ್ಯ ಮಾಪಕರನ್ನು ಅಭಿನಂದಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಶೇ 90 ಯಾ ಅಧಿಕ ಅಂಕ ಗಳಿಸಿದ ಮತ್ತು ಪಿ.ಯು.ಸಿ ಯಲ್ಲಿ ಶೇ 80ಯಾ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಸಂಸ್ಥೆಯಲ್ಲಿ ಬಡ್ದಿರಹಿತ ಸೋಲಾರ್ ಸಾಲದ ವ್ಯವಸ್ಥೆ, ಸಾಲಗಳಿಗೆ ಸೇವಾ ಶುಲ್ಕವಿರುವುದಿಲ್ಲ. ಇ-ಸ್ಟಾಂಪಿಂಗ್, ಲಾಕರ್ ವ್ಯವಸ್ಥೆ, ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ.
2022-23ರಲ್ಲಿ ಸಂಸ್ಥೆಯ ಠೇವಣಿ 100 ಕೋಟಿಗೂ ದಾಟಿಸುವ ಯೋಜನೆ, ಅದಲ್ಲದೇ ಪರ್ಕಳದಲ್ಲಿ ಖರೀದಿಸಿದ ಜಾಗದಲ್ಲಿ ಕಟ್ಟದ ನಿರ್ಮಾಣದ ರೂಪುರೇಷೆ ನೀಡಿ ನಿಯೋಜಿತ ಕಟ್ಟಡದ ಚಿತ್ರ ಬಿಡುಗಡೆ ಮಾಡಿ ಸಂಸ್ಥೆಯ ಅಭಿವೃದ್ದಿಗೆ ಸಹಕರಿಸಿದ ನಿರ್ದೇಶಕರಿಗೆ, ಸದಸ್ಯರಿಗೆ ಶಾಖಾ ಸಲಹಾ ಸಮಿತಿ ಸದಸ್ಯರಿಗೆ, ಠೇವಣಿ ಸಂಗ್ರಾಹಕರಿಗೆ ಅಭಿನಂದಿಸುತ್ತಾ ಅಧ್ಯಕ್ಷರಾದ ಅಶೋಕ್ ಕಾಮತ್ ರವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ನಿತ್ಯಾನಂದ ನರಸಿಂಗೆ ವರದಿ ಲೆಕ್ಕಪತ್ರ ಮಂಡಿಸಿದರು.
ಬಿ. ರಾಮಕೃಷ್ಣ ನಾಯಕ್ ವಾರ್ಷಿಕ ಮಹಾಸಭೆಯ ನೋಟೀಸು ಓದಿ ದಾಖಲಿಸಿದರು. ಸಂಸ್ಥೆಯ ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್ ಬಿ. ಪರ್ಕಳ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲಬೆಟ್ಟು, ರವೀಂದ್ರ ಪಾಟ್ಕರ್ ಬಂಟಕಲ್ಲು, ವಿಜೇತ್
ಕುಮಾರ್ ಬೆಳ್ಳರ್ಪಾಡಿ, ಗಣಪತಿ ಪ್ರಭು ಕುಕ್ಕೆಹಳ್ಳಿ, ರೂಪ ನಾಯಕ್ ಪರ್ಕಳ ಉಪಸ್ಥಿತರಿದ್ದರು.
ಸುಧಾಕರ್ ನಾಯಕ್ ನಿರೂಪಿಸಿ ನಿರ್ದೇಶಕ ವಿಜೇತ್ ಕುಮಾರ್ ವಂದಿಸಿದರು.