ಕುಂದಾಪುರ: ಸ. ಹಿ. ಪ್ರಾ. ಶಾಲೆ ಇಡೂರು ಕುಂಜ್ಞಾಡಿಯಲ್ಲಿ ಅರಣ್ಯ ಇಲಾಖೆ ಮತ್ತು ಇಕೋ ಕ್ಲಬ್ ಜಂಟಿ ಆಶ್ರಯದಲ್ಲಿ ಉಚಿತ ಸಸಿಗಳ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಹಾಗೂ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಜಡ್ಕಲ್ ಶಾಖೆ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ಕುಂಬಾರ್ ಇವರು ನಾಗೇಶ್ ಪ್ರಭು ಹಾರ್ಮಣ್ ಇವರ ಮೂಲಕ ಕೊಡಮಾಡಲ್ಪಟ್ಟ ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಸಸ್ಯ ಸಂರಕ್ಷಣೆಯ ಮಹತ್ವ ಮತ್ತು ಪರಿಸರದ ಕುರಿತು ಬಗ್ಗೆ ಮಾತನಾಡಿದರು.
ದಾನಿಗಳಾದ ಶಿವರಾಮ ಶೆಟ್ಟಿ ದೇವಲ್ಕುಂದ ಹೊಸೂರು ಇವರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಬೈಂದೂರು ವಲಯದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್ ಶಾಲೆಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಆನಂದ ಪೂಜಾರಿ ವಹಿಸಿದ್ದರು. ಶಿಕ್ಷಕರಾದ ಪ್ರತಾಪ್ ಕುಮಾರ್ ವಿ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗಿರಿಜಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಗನವಾಡಿ ಕಾರ್ಯಕರ್ತೆ ಶಾಂತಾಬಾಯಿ ವಂದಿಸಿದರು.
ಇಕೋ ಕ್ಲಬ್ ನೋಡಲ್ ಶಿಕ್ಷಕರಾದ ಶಿವಾನಂದ ಕೆ ಕಾರ್ಯಕ್ರಮ ನಿರೂಪಿಸಿದರು.ಅರಣ್ಯ ವೀಕ್ಷಕ ಹರಿಪ್ರಸಾದ್, ಅರಣ್ಯ ರಕ್ಷಕ ಬಸವರಾಜ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ಸಿ ಆರ್ ಪಿ ವಂಡ್ಸೆ ಕ್ಲಸ್ಟರ್ ನಾಗರಾಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.