Monday, January 20, 2025
Monday, January 20, 2025

ರಥಬೀದಿ ಕಾಲೇಜಿನಲ್ಲಿ ಉದ್ಯೋಗ ಮೇಳ

ರಥಬೀದಿ ಕಾಲೇಜಿನಲ್ಲಿ ಉದ್ಯೋಗ ಮೇಳ

Date:

ಮಂಗಳೂರು: ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅವರದೇ ಆದಂತಹ ಪ್ರತಿಭೆಗಳೊಂದಿಗೆ ಉದ್ಯೋಗವನ್ನು ಅರಸುತ್ತಿದ್ದು, ಅವರ ಪ್ರತಿಭೆಗೆ ಅನುಗುಣವಾಗಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದು ಶಾಸಕರಾದ ಡಿ. ವೇದವ್ಯಾಸ ಕಾಮತ್ ಹೇಳಿದರು.

ಅವರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಕೋಶ, ಉದ್ಯೋಗ ಕೋಶ ಮತ್ತು ಮಂಗಳೂರಿನ ಯು.ಎನ್.ಡಿ.ಪಿ ಹಾಗೂ ಬಿಲ್ಲವರ ಎಮ್ಪ್ಲಾಯೀಸ್ ವೆಲ್ಫೇರ್ ಸೊಸೈಟಿ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳ-2022 ನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಒದಗಿ ಬರುತ್ತಿದ್ದು, ಅದನ್ನು ಯುವಜನತೆ ಸರಿಯಾದ ಸಮಯದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಾವು ಬೇರೆಯವರಿಗಾಗಿ ನಿರೀಕ್ಷಿಸಬಾರದು. ನಮಗೆ ನಾವೇ ಸ್ಪರ್ಧಾಳುಗಳಾಗಿರಬೇಕು, ನಾವು ಬೇರೆಯವರನ್ನು ಸ್ಪರ್ಧಾಳುಗಳೆಂದು ಭಾವಿಸಿದರೆ ಅವರು ಮುಂದೆ ಸಾಗುತ್ತಾರೆ ನಾವು ಹಿಂದೆಯೇ ಉಳಿಯುತ್ತೇವೆ ಎಂದ ಅವರು ನಾವು ಪ್ರಾಮಾಣಿಕ ಪ್ರಯತ್ನದಿಂದ ನಮ್ಮ ಕೆಲಸವನ್ನು ಮಾಡಬೇಕು. ಆಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಅಂತಹ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಾವು ಯಾರನ್ನೂ ನೋಡಿ ಅನುಕರಣೆ ಮಾಡುವುದಲ್ಲ. ನಾವು ನಮ್ಮ ತನದಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದ ಅವರು ನಾವು ಕೇವಲ ಉದ್ಯೋಗವನ್ನು ಹುಡುಕುವುದಲ್ಲ, ನಮ್ಮ ಪ್ರತಿಭೆಯಿಂದ ನಾವು ಸ್ವ ಉದ್ಯೋಗವನ್ನು ಪ್ರಾರಂಭಿಸಿ, ಅದರಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಬಿಇಡ್ಲ್ಯುಎಸ್ ನ ಉಪಾಧ್ಯಕ್ಷ ತುಕಾರಾಮ್ ಪೂಜಾರಿ ಹಾಗೂ ಯು.ಎನ್.ಡಿ.ಪಿ.ಯ ಉದ್ಯಮಶೀಲತೆಯ ಅಭಿವೃದ್ಧಿ ಸಹಾಯಕ ಉಮೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ವಹಿಸಿ ಮಾತನಾಡಿದರು.

ಮುಖ್ಯ ಶೈಕ್ಷಣಿಕ ಸಂಯೋಜಕರುಗಳಾದ ಡಾ. ವಸಂತಿ ಪಿ., ಡಾ. ನಾಗಪ್ಪ ಗೌಡ ಕೆ., ಐಕ್ಯೂಎಸಿ ಸಂಯೋಜಕರಾದ ದೇವಿಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲಕ ಡಾ. ಸುಧಾಕರನ್ ಟಿ. ಮತ್ತಿತರರು ಉಪಸ್ಥಿತರಿದ್ದರು.

ಉನ್ನತಿ ಸಂಚಾಲಕರಾದ ಡಾ. ಶೇಷಪ್ಪ ಕೆ. ಸ್ವಾಗತಿಸಿ, ಉದ್ಯೋಗ ಕೋಶದ ಸಂಚಾಲಕರಾದ ಡಾ. ಮಾಲತಿ ವಂದಿಸಿದರು. ಉದ್ಯೋಗ ಮೇಳದಲ್ಲಿ 300 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 20 ಕಂಪೆನಿಗಳು ಭಾಗವಹಿಸಿ, 115 ವಿದ್ಯಾರ್ಥಿಗಳು ಆಯ್ಕೆಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!