Saturday, November 23, 2024
Saturday, November 23, 2024

ಕರ್ನಾಟಕ ರಾಜ್ಯ ಪೂರಕ ಕಾನೂನು ಸುಗಮಕಾರರ ಜಿಲ್ಲಾ ಪ್ರತಿನಿಧಿಗಳ ಸಮಾವೇಶ

ಕರ್ನಾಟಕ ರಾಜ್ಯ ಪೂರಕ ಕಾನೂನು ಸುಗಮಕಾರರ ಜಿಲ್ಲಾ ಪ್ರತಿನಿಧಿಗಳ ಸಮಾವೇಶ

Date:

ಮಂಗಳೂರು: ಡೀಡ್ಸ್‌ ವತಿಯಿಂದ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯದ ಬಲವರ್ಧನೆ ಮತ್ತು ಮುಂದಿನ ಯೋಜನೆಯ ಉದ್ದೇಶದೊಂದಿಗೆ ಮಂಗಳೂರು ನಂತೂರಿನಲ್ಲಿ ಜಿಲ್ಲಾ ಪ್ರತಿನಿಧಿಗಳ ಸಮಾವೇಶ ನಡೆಯಿತು. ಕಳೆದ 5 ತಿಂಗಳಲ್ಲಿ ಸುಗಮಕಾರರ ಸಮುಚ್ಚಯಗಳು ನಡೆಸಿದ ಲಿಂಗತ್ವ, ಮಹಿಳಾ ಕಾನೂನುಗಳ ಅರಿವಿನ ಕಾರ್ಯಕ್ರಮಗಳು, ನಿರ್ವಹಿಸಿದ ಮಹಿಳಾ ಪ್ರಕರಣಗಳ ಪರಿಣಾಮಗಳು ಮತ್ತು ಕಲಿಕೆಗಳನ್ನು ಗುಂಪುವಾರು ವರದಿ ಮಾಡಿ ಮಂಡಿಸಲಾಯಿತು.

ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸ್ಥಳೀಯ ತಳಮಟ್ಟದ ಮಹಿಳೆಯರಿಗೆ ವಿಷಯಾಧಾರಿತ ಮಾಹಿತಿ ಕಾರ್ಯಕ್ರಮಗಳು ಪರಿಣಾಮ ಬೀರಿವೆ, ಬದಲಾವಣೆಗಳನ್ನು ವ್ಯಕ್ತಿಗತವಾಗಿ, ಮನೆಗಳಲ್ಲಿ ಮಾಡಿರುವ ಯಶೋಗಾಥೆಗಳನ್ನು ಸುಗಮಕಾರರು ತಿಳಿಸಿದರು. ಜತೆಗೆ ನಿರ್ವಹಿಸಿದ ನೊಂದ ಮಹಿಳೆಯರ ಪ್ರಕರಣಗಳನ್ನು, ಸಂಬಂಧಿತ ಇಲಾಖೆಗಳೊಂದಿಗೆ ಈ ನಿಟ್ಟಿನಲ್ಲಿ ವ್ಯವಹರಿಸಿರುವುದನ್ನು ತಿಳಿಸಿದರು. ಈ ಅವಧಿಯನ್ನು ತುಕಾರಾಮ ಎಕ್ಕಾರು ನಿರ್ವಹಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಅನಿತಾ ರವಿಶಂಕರ್‌ ಸಂಶೋಧನೆ ಬಗ್ಗೆ ಮಾಹಿತಿ ನೀಡಿದರು. ಸಮಸ್ಯೆ-ಸ್ಥಿತಿಗತಿಯನ್ನು ಅರಿಯುವ, ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಬಹಳ ಮುಖ್ಯ. ಇದಕ್ಕೆ ಲಭ್ಯವಿರುವ ಮಾಹಿತಿಗಳು, ಉದ್ದೇಶ, ವಿಧಾನಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ನಂತರ ಮಾಹಿತಿಯ ವಿಶ್ಲೇಷಣೆ ನಡೆಯುತ್ತದೆ, ನಂತರ ವರದಿ ತಯಾರಿಸಲಾಗುತ್ತದೆ.

ಸರಳವಾಗಿಯೂ ಸಂಶೋಧನೆಯನ್ನು, ಕ್ರಿಯಾ ಸಂಶೋಧನೆಯನ್ನು ಮಾಡಬಹುದಾಗಿದೆ. ಇಲಾಖೆ-ಸಂಸ್ಥೆಗಳು ಹೆಚ್ಚಾಗಿ ಕ್ರಿಯಾ ಸಂಶೋಧನೆಯನ್ನು ಮಾಡುತ್ತಾರೆ. ಏನು ಯಾರಿಗೆ ಎನ್ನುವ ಪ್ರಶ್ನೆಗಳು ಕ್ರಿಯಾ ಸಂಶೋಧನೆಯಲ್ಲಿ ಬಹಳ ಮುಖ್ಯ. ಕ್ರಿಯಾ ಸಂಶೋಧನೆಗೆ ಸಂಬಂಧಿಸಿ ತಾವು ಪಾಲ್ಗೊಂಡ ಮತ್ತು ಗಮನಿಸಿದ ಅಂಶಗಳನ್ನು ಅನುಭವಯುತವಾಗಿ ಮಂಡಿಸಿದರು. ಭಾಗಾರ್ಥಿಗಳ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಅಬ್ದುಲ್‌ ರಹಿಮಾನ್‌ ಪಾಶಾರವರ ಇತ್ತೀಚಿನ ಸರಳ ಪುಸ್ತಕವನ್ನು ಎಲ್ಲರಿಗೂ ನೀಡಿ ಓದಿಸಲಾಯಿತು. ಜತೆಗೆ ಮುಂದಿನ 2 ತಿಂಗಳ ಜಿಲ್ಲಾ ಸಮುಚ್ಚಯಗಳ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ತಳಮಟ್ಟದ ಮಾಹಿತಿ ಕಾರ್ಯಕ್ರಮಗಳು, ಹೊಸ ಸುಗಮಕಾರರಿಗೆ ಪ್ಯಾರಾ ಲೀಗಲ್‌ ತರಬೇತಿ, ಸರಕಾರಿ ಅಧಿಕಾರಿಗಳಿಗೆ ಲಿಂಗತ್ವ-ಮಹಿಳಾ ಕಾನೂನುಗಳ ಮಾಹಿತಿ, ಮಹಿಳಾಪರ ಸಂಸ್ಥೆಗಳು- ಸರಕಾರಿ ನ್ಯಾಯ ವ್ಯವಸ್ಥೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯನ್ನು ಯೋಜಿಸಲಾಯಿತು. ಈ ಅವಧಿಯನ್ನು ಡೀಡ್ಸ್‌ ನಿರ್ದೇಶಕಿ ಮರ್ಲಿನ್‌ ಮಾರ್ಟಿಸ್‌ ನಿರ್ವಹಿಸಿದರು.

ಗದಗ, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ 22 ಮಂದಿ ಸುಗಮಕಾರ ಪ್ರತಿನಿಧಿಗಳು ಭಾಗವಹಿಸಿದ್ದರು. ಡೀಡ್ಸ್‌ನ ವಕಾಲತ್ತು ಅಧಿಕಾರಿ ಖುಶಿ ದೇಸಾಯಿ ಸ್ವಾಗತಿಸಿ, ಪ್ರತಿನಿಧಿಗಳ ಪರಿಚಯ ಮಾಡಿಸಿದರು. ರಾಜ್ಯ ಸುಗಮಕಾರರ ಸಮುಚ್ಚಯದ ಅಧ್ಯಕ್ಷೆ ಹರಿಣಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!