ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಾ ಕುಳಾಯಿ ವಿರುದ್ಧ ತೇಜೋವಧೆ ಮಾಡಿದವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿ ದೂರು ನೀಡಲಾಯಿತು.
ಟೋಲ್ ಗೇಟ್ ವಿರೋಧಿ ಸಮಿತಿ ನೇತೃತ್ವದಲ್ಲಿ ನಡೆದ ಸುರತ್ಕಲ್ ಟೋಲ್ ಗೇಟ್ ತೆರವು ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ದ.ಕ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ, ಮಂಜುಳಾ ನಾಯಕ್, ಪ್ರತಿಭಾ ಕುಳಾಯಿ, ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಅಪ್ಪಿ, ಸುರೇಖಾ ಚಂದ್ರಹಾಸ್, ಚಂದ್ರಕಲಾ ಡಿ ರಾವ್, ಗೀತಾ ಅತ್ತಾವರ್, ಜಿಲ್ಲಾ ಪದಾಧಿಕಾರಿ ನಮಿತಾ ಡಿ ರಾವ್, ಉಷಾ ಶರತ್, ಸುನೀತಾ, ಗೀತಾ ಪ್ರವೀಣ್, ಬ್ಲಾಕ್ ಅಧ್ಯಕ್ಷರುಗಳಾದ ಶಶಿಕಲಾ ಪದ್ಮನಾಭ್, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಚಂದ್ರಿಕಾ ರೈ, ವೃಂದಾ ಪೂಜಾರಿ, ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ವಸಂತಿ ಅಂಚನ್, ರೂಪಾ ಚೇತನ್, ರಮಣಿ ಉಮೇಶ್, ಸೆಲೆಸ್ತೀನ್ ಲ್ಕ್ರಾಸ್ತಾ, ಮೋಹಿನಿ ಅಮೀನ್, ಶೈನಿ, ಕಾರ್ಪೋರೇಟರ್ ಝೀನತ್ ಶಂಶುದ್ದೀನ್, ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ವಿದ್ಯಾ, ಪ್ರವೀತಾ, ವಿಕ್ಟೋರಿಯಾ, ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರಮೀಳ, ನಾಗವೇಣಿ, ಅನಿತಾ, ಕವಿತಾ, ಯಶವಂತಿ, ತಸ್ನೀಮ್, ಉಡುಪಿ ಮಹಿಳಾ ಕಾಂಗ್ರೆಸ್ ನ ಜ್ಯೋತಿ ಮೆನನ್ ಮುಂತಾದವರು ಉಪಸ್ಥಿತರಿದ್ದರು.