Tuesday, January 21, 2025
Tuesday, January 21, 2025

ಯುವಕ‌ ಮಂಡಲ(ರಿ.) ಇರಾ- ಕೆಸರ್ಡೊಂಜಿ ದಿನ

ಯುವಕ‌ ಮಂಡಲ(ರಿ.) ಇರಾ- ಕೆಸರ್ಡೊಂಜಿ ದಿನ

Date:

ಬಂಟ್ವಾಳ: ಯುವಕ‌ ಮಂಡಲ(ರಿ.) ಇರಾ ಇದರ‌ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಕ್ರೀಡಾ ಕಾರ್ಯಕ್ರಮ ಕೆಸರ್ಡೊಂಜಿ ದಿನ ಇರಾ ಬಾವಬೀಡಿನ‌ ಗದ್ದೆಯಲ್ಲಿ ನಡೆಯಿತು. ಬಾವಬೀಡು ದಿ| ಗೋಪಿ ಎಸ್ ಭಂಡಾರಿ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾವಬೀಡು ವೇಣುಗೋಪಾಲ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮುಖ್ಯ ಅತಿಥಿಗಳಾಗಿದ್ದ, ಪಿಲಿಕುಳ ವನ್ಯದಾಮದ ನಿರ್ದೇಶಕರಾದ ಜಯಪ್ರಕಾಶ್ ಭಂಡಾರಿ ಬಾವಬೀಡು ಮಾತನಾಡಿ, ಯುವಕ ಮಂಡಲದ ಕಾರ್ಯವನ್ನು ಶ್ಲಾಘಿಸಿ ಶುಭ‌ ಹಾರೈಸಿದರು. ಮತ್ತೋರ್ವ ಅತಿಥಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ| ಸತೀಶ್ ಭಂಡಾರಿ ಬಾವಬೀಡು ಮಾತನಾಡಿ, ಮುಂದಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮದ ಅವಶ್ಯಕತೆಯನ್ನು ವಿವರಿಸಿದರು.

ಮಾಜಿ ಸಚಿವ ಯು.ಟಿ. ಖಾದರ್, ಮುಡಿಪು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಬಂಟ್ವಾಳ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಇರಾ‌ ಗ್ರಾಮ‌ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಜಾಕ್ ಕುಕ್ಕಾಜೆ, ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಕುಕ್ಕಾಜೆ, ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಸುಭೋದ್ ಭಂಡಾರಿ ಬಾವಬೀಡು‌, ಐ ನೇಮು‌ ಪೂಜಾರಿ ಆಚೆ‌ಬೈಲು ಶುಭ ಹಾರೈಸಿದರು.

ಸಾಯಂಕಾಲ ಸಮಾರೋಪ‌‌‌‌ ಸಮಾರಂಭದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ‌ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಜಗದೀಶ್ ಶೆಟ್ಟಿ ಇರಾಗುತ್ತು, ವೈ.ಬಿ‌‌ ಸುಂದರ್, ಚಿಣ್ಣರಲೋಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಚಂದ್ರಹಾಸ ರೈ ಬಾಲಾಜಿಬೈಲು, ಬಿ.ಜೆ.ಪಿ ಮುಖಂಡರಾದ ಸತೀಶ್ ‌ಕುಂಪಲ,‌ ಹೇಮಂತ್ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳ್ಯಾರ್, ಕಲ್ಲಾಡಿ ವಿಠಲ‌ ಶೆಟ್ಟಿ ಸೇವಾ ಟ್ರಸ್ಟ್ ನ‌ ಅಧ್ಯಕ್ಷರಾದ‌ ಜಯರಾಮ್ ಪೂಜಾರಿ‌‌ ಸೂತ್ರಬೈಲು, ಕಾರ್ಯದರ್ಶಿಗಳಾದ ಗಣೇಶ್ ಕೊಟ್ಟಾರಿ ಸಂಪಿಲ, ಯುವಕ‌ ಮಂಡಲದ‌ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ವಿಜೇತರಿಗೆ ಬಹುಮಾನ‌ ವಿತರಿಸಿದರು.

ಊರಿನ ಗಣ್ಯರು ಹಾಗು ಯುವಕ ಮಂಡಲದ ಸರ್ವ ಸದಸ್ಯರು ಈ‌‌ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯುವಕ‌ ಮಂಡಲದ ಹಿರಿಯ ಸದಸ್ಯರಾದ ಯತಿರಾಜ್ ಶೆಟ್ಟಿ ಸಂಪಿಲ, ನಿತೇಶ್ ಶೆಟ್ಟಿ ಸಂಪಿಲ ಹಾಗು ಶಿಶನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!