ಮಂಗಳೂರು: ಮಂಗಳೂರು ನಗರದ ಸರ್ಕಾರಿ ಆಸ್ಪತ್ರೆಯೊಂದರ ಬಳಿ ಮಹಿಳೆಯೋರ್ವಳು ಪಾನಮತ್ತಳಾಗಿದ್ದಾಳೆ ಈಕೆಯ ಬಳಿ ಹೆಣ್ಣುಮಗುವೊಂದಿದ್ದು ಮಗುವಿಗೆ ರಕ್ಷಣೆ ನೀಡುವಂತೆ ಸಾರ್ವಜನಿಕರಿಂದ ಚೈಲ್ಡ್ ಲೈನ್ -1098ಕ್ಕೆ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಚೈಲ್ಡ್ ಲೈನ್ ತಂಡವು ಪಾಂಡೇಶ್ವರ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜುಲೈ 15 ಸಾರ್ವಜನಿಕರು ತಿಳಿಸಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಮಹಿಳೆಯು ವಿಪರೀತ ಪಾನಮತ್ತಳಾಗಿ ಕಂಡುಬಂದಿದ್ದರಿಂದ ಆಕೆಯ ಬಳಿಯಿದ್ದ 8 ತಿಂಗಳ ಮಗುವಿಗೆ ಸೂಕ್ತ ರಕ್ಷಣೆಯ ಅಗತ್ಯವಿದ್ದುದರಿಂದ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕಿಯರ ವಸತಿ ನಿಲಯದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ.
ಈ ಮಹಿಳೆಯು ಕಳೆದ 15 ದಿನಗಳಿಂದ ಮಗುವನ್ನು ಹಿಡಿದುಕೊಂಡು ಪಾನಮತ್ತಳಾಗಿ ನಗರದಲ್ಲಿ ತಿರುಗಾಡುತ್ತಿದ್ದಳು ಎಂಬುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಈ ರಕ್ಷಣಾ ತಂಡದಲ್ಲಿ ಚೈಲ್ಡ್ ಲೈನ್ 1098 ದ.ಕ.ಜಿಲ್ಲೆಯ ಕೇಂದ್ರ ಸಂಯೋಜಕನಾದ ದೀಕ್ಷಿತ್ ಅಚ್ರಪ್ಪಾಡಿ, ಸದಸ್ಯರಾದ ಆಶಾಲತ ಕುಂಪಲ, ಸಿಬ್ಬಂದಿಗಳಾದ ಸುಪ್ರಿತ್ ಆರ್ಲಪದವು, ಕವನ್ ಕಬಕ, ಕು.ಶೋಭಾ ರವರು ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.