Wednesday, January 22, 2025
Wednesday, January 22, 2025

ರಥಬೀದಿ ಪ್ರಥಮ ದರ್ಜೆ ಕಾಲೇಜು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕೋರ್ಸುಗಳಿಗೆ ಪ್ರವೇಶಾತಿ ಆರಂಭ

ರಥಬೀದಿ ಪ್ರಥಮ ದರ್ಜೆ ಕಾಲೇಜು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕೋರ್ಸುಗಳಿಗೆ ಪ್ರವೇಶಾತಿ ಆರಂಭ

Date:

ಮಂಗಳೂರು: ಮಂಗಳೂರಿನ ಹೃದಯ ಭಾಗವಾದ ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯ ಕೆ.ಎಸ್.ಒ.ಯು ಕಲಿಕಾರ್ಥಿ/ ಸಹಾಯ ಕೇಂದ್ರದಲ್ಲಿ ೨೦೨೨-೨೩ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ನಾತಕ, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕೋರ್ಸುಗಳಿಗೆ ಆನ್‌ಲೈನ್ ಅರ್ಜಿಗಳನ್ನು ಕರೆಯಲಾಗಿದೆ.

ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಬ್ಯಾಂಕ್ ಪಾಸ್‌ಬುಕ್, ತಮ್ಮಲ್ಲಿ ಇಟ್ಟುಕೊಂಡಿರತಕ್ಕದ್ದು. ಅಭ್ಯರ್ಥಿಗಳು ವಿದ್ಯಾಭ್ಯಾಸ ಸಂಬಂಧಪಟ್ಟ ಪ್ರಮಾಣ ಪತ್ರ-ಎಸ್.ಎಸ್.ಎಲ್.ಸಿ, ಪಿ.ಯು.ಸಿ ಅಂಕಪಟ್ಟಿ ಮಹಿಳಾ ಅಭ್ಯರ್ಥಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಲ್ಲಿ ಅದನ್ನು ತಮ್ಮಲ್ಲಿ ಇಟ್ಟು ಕೊಂಡಿರತಕ್ಕದ್ದು.

ಅಭ್ಯರ್ಥಿಗಳು ತಾವೇ ಸ್ವತಃ ಸದ್ರಿ ಕಲಿಕಾರ್ಥಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ೨೦೨೧-೨೨ ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳಾದ ಸ್ನಾತಕ (ಯುಜಿ) ವಿಭಾಗದಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ(ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್), ಬಿ.ಎಡ್ (ಸಿಇಟಿ ಪರೀಕ್ಷೆ ಮುಖಾಂತರ), ಬಿ.ಎಸ್ಸಿ(ಸಂಯೋಜನೆಗಳು) ಬಿ.ಎಸ್ಸಿ-ಹೋಮ್ ಸೈನ್ಸ್, ಬಿ.ಎಸ್ಸಿ- ಇನ್‌ಫರ್ ಮೇಷನ್ ಟೆಕ್ನಾಲಜಿ(ಬಿ.ಎಸ್ಸಿ-ಐಟಿ), ಬಿ.ಸಿ.ಎ-ಬ್ಯಾಚುಲರ್ ಆಫ್ ಕಂಪ್ಯೂಟರ್ ಆಪ್ಲಿಕೇಶನ್ ಕೋರ್ಸುಗಳಿದ್ದು ಹಾಗೂ ಸ್ನಾತಕೋತ್ತರ(ಪಿಜಿ) ಶಿಕ್ಷಣ ವಿಭಾಗದಲ್ಲಿ ಎಂ.ಎ (ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಉರ್ದು, ಸಂಸ್ಕೃತ, ಶಿಕ್ಷಣ ಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜ ಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ, ಎಂ.ಬಿ.ಎ(ಪ್ರವೇಶ ಪರೀಕ್ಷೆ ಇರುವುದಿಲ್ಲ) ಸ್ಪೆಷಲೈಜೇಶನ್: ಫೈನಾನ್ಸ್, ಮಾರ್ಕೆಂಟಿಂಗ್, ಹೆಚ್.ಆರ್.ಎಂ, ಆಫರೇಷನ್ಸ್, ಟೂರಿಸಂ, ಕಾರ್ಪುರೇಟ್ ಲಾ, ಇನ್‌ಫರ್‌ಮೇಶನ್ ಟೆಕ್ನಾಲಾಜಿ, ಎಂಕಾಂ ಡ್ಯುಯಲ್ ಸ್ಪೆಷಲೈಜೇಶನ್:(ಅಕೌಂಟಿಂಗ್ ಮತ್ತು ಫೈನಾನ್ಸ್/ ಹೆಚ್.ಆರ್.ಎಂ, ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಹೆಚ್ ಆರ್.ಎಂ/ಫೈನಾನ್ಸ್, ಎಂ.ಲಿಬ್.ಐ.ಎಸ್.ಸಿ, ಎಂ.ಎಸ್.ಸಿ(ರಸಾಯನಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋ ಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಶನ್ ಡಯೆಟಿಕ್ಸ್, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಞಾನ, ಭೂಗೋಳ ಶಾಸ್ತ್ರ, ಮೈಕ್ರೋ ಬಯಾಲಾಜಿ, ಮನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಫುಡ್ ನ್ಯೂಟ್ರಿಷನ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಕೋರ್ಸುಗಳಿರುತ್ತವೆ.

ಅಲ್ಲದೆ ಒಂದು ವರ್ಷ ಅವಧಿಯ ಪಿ.ಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು, ಡಿಪ್ಲೋಮ ಕೋರ್ಸುಗಳು ಸಹ ಲಭ್ಯವಿದೆ. ಹಾಗೂ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಏಕ ಕಾಲದಲ್ಲಿ ಓದಲು ಅವಕಾಶವಿರುತ್ತದೆ.ಒಂದು ಭೌತಿಕ ಕ್ರಮದಲ್ಲಿ, ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇಂದ್ರದ ಕಛೇರಿ ಸಂಖ್ಯೆ 8970788947 / 0824-2491073 / 2494109 ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!