ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ ರವರಿಗೆ ಹತ್ಯೆ ಬೆದರಿಕೆಯ ಪ್ರಚೋದನಾಕಾರಿ ಪೋಸ್ಟ್ ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ನೇತೃತ್ವದಲ್ಲಿ ಮೀನುಗಾರ ಮುಖಂಡರ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿ ಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮತ್ತು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ, ಧಾರ್ಮಿಕ, ಸಾಮಾಜಿಕ, ಸಹಕಾರಿ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆ ಬೇಡಿಕೆಗಳಿಗೆ ಸೂಕ್ತ ಸ್ಪಂದಿಸಿ ಮೀನುಗಾರರ ಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ಯಶ್ಪಾಲ್ ಸುವರ್ಣ ರವರಿಗೆ ಹತ್ಯೆ ಬೆದರಿಕೆಯನ್ನು ಸಮಸ್ತ ಮೀನುಗಾರ ಸಮುದಾಯ ತೀವ್ರವಾಗಿ ಖಂಡಿಸು ತ್ತಿದ್ದು, ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷರಾದ ಅಶ್ವಥ್ ಕಾಂಚನ್, ಮಂಗಳೂರು 7 ಪಟ್ನ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಗೌತಮ್ ಕೋಡಿಕಲ್, ದ.ಕ. ಮೊಗವೀರ ಯುವ ವೇದಿಕೆ ಅಧ್ಯಕ್ಷರಾದ ಜಗದೀಶ್ ಬಂಗೇರ, ಕರಾವಳಿ ಮೀನುಗಾರರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಕಾಂಚನ್ ಬೋಳಾರ, ಮಹಾಜನ ಬೆಂಗ್ರೆ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಚೇತನ್ ಬೆಂಗ್ರೆ, ಮೀನುಗಾರ ಮುಖಂಡರಾದ ಲೀಲಾಧರ್ ತಣ್ಣೀರುಬಾವಿ, ಚಂದ್ರಶೇಖರ್ ಶ್ರೀಯಾನ್, ಸುಭಾಷ್ ಬೋಳೂರು, ಯಶವಂತ್ ಬಿ ಅಮೀನ್ ಉಳ್ಳಾಲ, ಬಾಬು ಬಂಗೇರ ಉಳ್ಳಾಲ, ಸುಧೀರ್ ಶ್ರೀಯನ್, ಸುದರ್ಶನ್ ಕೇಶವ ಪುತ್ರನ್, ಯಾದವ ಸಾಲಿಯನ್, ಕಿಶೋರ್ ಮುಕ್ಕ, ಉದಯ ಅಮೀನ್, ವಿಜಿತ್, ಭಾಸ್ಕರ್, ಚಿದಾನಂದ, ಪುರುಷೋತ್ತಮ್ ಅಮೀನ್, ಚಂದ್ರಹಾಸ ಬೆಂಗ್ರೆ, ರಮೇಶ್ ಬೆಂಗ್ರೆ ಉಪಸ್ಥಿತರಿದ್ದರು.