ಮಂಗಳೂರು, ಜ.9: ಸುರ್ವೆ ಕಲ್ಚರಲ್ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಿತು. ತಾಂತ್ರಿಕ ಸೇವೆ ಹಾಗೂ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಂಗಳೂರು ಮಹಾನಗರ ಪಾಲಿಕೆ ಯೋಜನಾಧಿಕಾರಿ ಎನ್ ನಾಗೇಂದ್ರ ಅವರನ್ನು ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಫಲಕದೊಂದಿಗೆ ಶಾಲು, ಹಾರ, ಮೈಸೂರು ಪೇಟ ತೊಡಿಸಿ ಅಭಿನಂದಿಸಲಾಯಿತು.
ಸುರ್ವೆ ಕಲ್ಚರಲ್ ಅಕಾಡೆಮಿ ಸ್ಥಾಪಕ ಅಧ್ಯಕ್ಷ ರಮೇಶ್ ತುರ್ವೆ, ಪದಾಧಿಕಾರಿಗಳಾದ ಡಾ. ಎಲ್ಲಪ್ಪ, ಕಲಾವಿದೆ ಕವಿತಾ ಸುಧೀಂದ್ರ ಮುಂತಾದವರಿದ್ದರು.