Thursday, January 23, 2025
Thursday, January 23, 2025

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ‘ಸ್ಕಿಲ್ ಫೋರ್ಜ್’ ಪುರಸ್ಕಾರ

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ‘ಸ್ಕಿಲ್ ಫೋರ್ಜ್’ ಪುರಸ್ಕಾರ

Date:

ಮೂಡುಬಿದಿರೆ, ಮಾ.6: ಸ್ಮಾರ್ಟ್ ಬ್ರಿಡ್ಜ್ ಸಂಸ್ಥೆಯು ಸೇಲ್ಸ್ ಫೋರ್ಸ್ ಸಹಯೋಗದಲ್ಲಿ ಹೈದರಾಬಾದ್‌ನಲ್ಲಿ ಆಯೋಜಿಸಿದ ಅಕಾಡೆಮಿಯ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ‘ಸ್ಕಿಲ್ ಫೋರ್ಜ್’ ಪುರಸ್ಕಾರಕ್ಕೆ ಪಾತ್ರವಾಗಿದೆ. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಎಐಸಿಟಿಇ ಸಹಯೋಗದ ಸ್ಮಾರ್ಟ್ ಬ್ರಿಡ್ಜ್ ಹಾಗೂ ಸೇಲ್ಸ್ ಫೋರ್ಸ್ ಬೆಂಬಲಿತ ವರ್ಚ್ಯುವಲ್ ಇಂಟರ್‌ಶಿಫ್ ಪ್ರೋಗ್ರಾಮ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ದಾಖಲಾರ್ಹ ಪ್ರಗತಿಯಾಗಿದೆ. ಎಐಇಟಿ ಈ ಸಾಧನೆ ಮಾಡಿದ ರಾಜ್ಯದ ಏಕೈಕ ಇಂಜಿನಿಯರಿಂಗ್ ಕಾಲೇಜು. ಆಳ್ವಾಸ್ ನಿಯೋಜನೆ ಮತ್ತು ತರಬೇತಿ ಘಟಕದ
ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ ಪ್ರಶಸ್ತಿ ಸ್ವೀಕರಿಸಿದರು. ಎಐಇಟಿಯು ಪ್ರತಿಷ್ಠಿತ ಕಂಪೆನಿಗಳಾದ ಸರ್ವೀಸ್‌ನೌ, ಯುಐಪಾತ್, ಇನ್ಫೋಸಿಸ್, ಸ್ಟ್ರಿಂಗ್‌ಬೋರ್ಡ್, ವಿಪ್ರೊ. ಟ್ಯಾಲೆಂಟ್ ನೆಕ್ಸ್ಟ್ ಮತ್ತಿತರ ಕಂಪೆನಿಗಳ ಸಹಯೋಗದಲ್ಲಿದ್ದು, ಕಾಲೇಜಿನ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ. ಕಾಲೇಜಿನ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!