Thursday, January 23, 2025
Thursday, January 23, 2025

ವೈಯಕ್ತಿಕ ಮಾಹಿತಿ ರಕ್ಷಣೆಯೇ ಇಂದಿನ ಸವಾಲು: ಕಾರ್ತಿಕ್ ಬಪ್ಪನಾಡ್

ವೈಯಕ್ತಿಕ ಮಾಹಿತಿ ರಕ್ಷಣೆಯೇ ಇಂದಿನ ಸವಾಲು: ಕಾರ್ತಿಕ್ ಬಪ್ಪನಾಡ್

Date:

ಮೂಡುಬಿದಿರೆ, ನ.27: ವೈಯಕ್ತಿಕ ಮಾಹಿತಿಯ ರಕ್ಷಣೆಯೇ ಇಂದಿನ ಸವಾಲು ಎಂದು ರಾಜ್ಯ ಸರ್ಕಾರದ ಸೈಬರ್‌ಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ 2023-24 ಶೈಕ್ಷಣಿಕ ವರ್ಷದ ‘ಸೈಬರ್ ಸೆಕ್ಯುರಿಟಿ ಕ್ಲಬ್’ನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವೈಯುಕ್ತಿಕ ಮಾಹಿತಿಯ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಾಹಿತಿಯ ಭದ್ರತೆ ಹಾಗೂ ಸುರಕ್ಷತೆಯು ನಿಮ್ಮ ಆದ್ಯತೆಯಾಗಬೇಕು ಎಂದರು. ತಂತ್ರಜ್ಞಾನಗಳ ಈ ಕಾಲದಲ್ಲಿ ನಮ್ಮ ವ್ಯವಹಾರ ಮತ್ತು ವೈಯಕ್ತಿಕ ವಿವರಗಳ (ಪ್ರೊಫೈಲ್)ಆಧಾರದ ಮೇಲೆ ಸೈಬರ್‌ಕ್ರೈಂಗಳು ನಡೆಯುತ್ತವೆ. ನಮ್ಮ ಭವಿಷ್ಯದ ಒಳಿತಿಗಾಗಿ ಬಹುವಿಧದ ಭದ್ರತೆ ನೀಡಲು, ನಮಗೆ ತಂತ್ರಜ್ಞಾನದ ಹಿಡಿತ ಇರಬೇಕು ಎಂದರು. ಲಭ್ಯತೆ, ಸಮಗ್ರತೆ, ಗೌಪ್ಯತೆ ಎಂಬ ಮೂರು ಅಂಶಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಂಡಾಗ ನಮ್ಮ ಮಾಹಿತಿ ಮತ್ತು ಡೇಟಾಗಳನ್ನ ಭದ್ರಪಡಿಸಿಕೊಳ್ಳಲು ಸಾಧ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ರೂಪಿಸುವ ಪ್ರಾಜೆಕ್ಟ್ಗಳು ಕೇವಲ ಚಿತ್ರ ಹಾಗೂ ಅಂಕಿ ಅಂಶಗಳಲ್ಲ. ನೀವು ಏನನ್ನು ಕಲಿತಿದ್ದೀರಿ ಎಂಬುದನ್ನು ಪ್ರಸ್ತುತಪಡಿಸುವುದು ಎಂದರು. ಅವುಗಳು ಸಮಾಜದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಾಯ ಮಾಡಬೇಕು ಎಂದರು. ಪ್ರಾಜೆಕ್ಟ್ನಲ್ಲಿ ಕೇಳಲ್ಪಡುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಇರಬೇಕು. ಅಂತಹ ಪ್ರಾಜೆಕ್ಟ್ಗಳಿಂದ ಪರಿವರ್ತನೆ ಸಾಧ್ಯ. ಪ್ರಾಯೋಗಿಕ ಅವಲೋಕನಗಳಿಂದ ನಮ್ಮನ್ನು ನಾವು ಬಲಪಡಿಸಿಕೊಳ್ಳಲು ಸಾಧ್ಯ ಎಂದರು. ಶಿಕ್ಷಣವನ್ನು ಬಹುತೇಕ ಎಲ್ಲರೂ ಪಡೆಯುತ್ತಾರೆ. ಆದರೆ ಪ್ರಾಯೋಗಿಕತೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಉತ್ತಮ ಶಿಕ್ಷಣವು ನಮ್ಮ ಬದುಕಿಗೆ ಮಾರ್ಗದರ್ಶನ ನೀಡುವ ಒಂದು ಸಾಧನ ಎಂದರು.

ಪ್ರತಿ ದಿನ ಸಂಜೆ 5 ರಿಂದ 7 ಘಂಟೆವರೆಗೆ ಸೈಬರ್ ಸೆಕ್ಯುರಿಟಿ ಕ್ಲಬ್‌ವತಿಯಿಂದ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ನೆಟೆನ್‌ರಿಚ್ ಪ್ರೊಡಕ್ಟ್ ಅರ್ಕಿಟೆಕ್ಟ್ ಆಶ್ರಿತ್ ಎನ್. ಶೆಟ್ಟಿ, ಕಾಲೇಜಿನ ಸಿಎಸ್‌ಇ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ, ಟೈಟೊವ್ರಿಇಂಡಿಯಾ ಸೈಬರ್ ಸೆಕ್ಯುರಿಟಿ ಎಂಜಿನಿಯರ್ ಹಾಗೂ ವಿನೀತ್ ಶೆಟ್ಟಿ, ಕ್ಲಬ್‌ನ ವಿದ್ಯಾರ್ಥಿ ಸಂಯೋಜಕ ಮುತ್ತುರಾಜು ಇದ್ದರು. ಸೈಬರ್ ಸೆಕ್ಯುರಿಟಿ ಕ್ಲಬ್ ಸಂಯೋಜಕಿ ದೀಪಿಕಾ ಕಾಮತ್ ಸ್ವಾಗತಿಸಿ, ಅಂಕಿತಾ ವಂದಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!