Monday, January 20, 2025
Monday, January 20, 2025

ಸೇವಾ ಮನೋಭಾವ ಕಟ್ಟಿಕೊಟ್ಟ ವಿವೇಕಾನಂದರು: ಚಕ್ರವರ್ತಿ ಸೂಲಿಬೆಲೆ

ಸೇವಾ ಮನೋಭಾವ ಕಟ್ಟಿಕೊಟ್ಟ ವಿವೇಕಾನಂದರು: ಚಕ್ರವರ್ತಿ ಸೂಲಿಬೆಲೆ

Date:

ವಿದ್ಯಾಗಿರಿ, ನ.11: ನಮ್ಮ ದೇಶದಲ್ಲಿ ಸೇವೆ ಎಂಬುದನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸ್ವಯಂ ಸೇವಕರ ದಿನ-೨೦೨೩ರ ಅಂಗವಾಗಿ ಆಳ್ವಾಸ್ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಇನ್ನೊಬ್ಬರಿಗೆ ನಿಸ್ವಾರ್ಥದಿಂದ ಮಾಡುವ ಸಹಾಯಕ್ಕೆ ಸೇವೆ ಎಂದು ಕರೆದರೆ, ವಿದೇಶಗಳಲ್ಲಿ ಇದನ್ನು ಸಾಮಾಜಿಕ ಚಟುವಟಿಕೆ ಎಂದು ಗುರುತಿಸುತ್ತಾರೆ. ಯಾವಾಗ ನಿರೀಕ್ಷೆಗಳು ಶೂನ್ಯವಾಗುತ್ತೋ, ಆಗ ಮಾಡುವ ಸಾಮಾಜಿಕ ಚಟುವಟಿಕೆ ಸೇವೆಯಾಗಿ ಗುರುತಿಸಿಕೊಳ್ಳುತ್ತದೆ ಎಂದರು. ಭಗವಂತ ಗರ್ಭಗುಡಿಯಲ್ಲಿ ಇರೋದಿಲ್ಲ, ವ್ಯಕ್ತಿಗಳ ಹೃದಯದಲ್ಲಿರುತ್ತಾನೆ. ಪರಬ್ರಹ್ಮ ಸ್ವರೂಪಿ ಆನಂದ ನೀಡುವ ಏಕೈಕ ಕ್ರಿಯೆ ಸೇವೆ. ಇತರರ ದುಃಖಕ್ಕೆ ಸ್ಪಂದಿಸಿದಾಗ ಸಿಗುವ ಸಂತೋಷ ನಮ್ಮ ಕಷ್ಟಕ್ಕೆ ಸ್ಪಂದಿಸಿದಾಗಲೂ ಸಿಗುವುದಿಲ್ಲ ಎಂದರು.

ಜೀವ ಸೇವೆಯನ್ನು ಯಾರು ಮಾಡುತ್ತಾರೋ ಅವರು ಶಿವ ಸೇವೆಯನ್ನು ಮಾಡಿದ ಹಾಗೆ. ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಹೃದಯಕ್ಕೆ ಅದ್ಭುತ ಆನಂದ ಸಿಗುತ್ತೆ. ಆತ್ಮಕ್ಕೆ ಆನಂದ ಸಿಗುವುದು ಸೇವೆಯಿಂದ ಮಾತ್ರ ಎಂದರು. ಸೇವಾ ಮನೋಭಾವ ಯುವಕರಲ್ಲಿ ಹೆಚ್ಚು ಮೂಡಬೇಕು. ಇದ್ದುದ್ದನ್ನೆಲ್ಲವನ್ನು ಸಮಾಜಕ್ಕೆ ಕೊಟ್ಟು ಗಾಂಧೀಜಿ ಜಗತ್‌ಮಾನ್ಯರಾದರು ಎಂದರು. ಭಾರತ ಸೇವಾ ಮಾರ್ಗದಲ್ಲಿ ಅಗ್ರಣಿಯಾಗಿದೆ. ಇಂದು ಭಾರತಕ್ಕೆ ಹೆಚ್ಚು ಶ್ರೇಷ್ಠತೆ ಸಿಕ್ಕಿರುವುದು ಸೇವಾ ಮನೋಭಾವದಿಂದ. ಭಾರತವನ್ನು ಕರಿ ನೇಷನ್ (ಸಾಂಬಾರು ಪದಾರ್ಥಗಳ), ಮೂಢನಂಬಿಕೆಗಳ ದೇಶ, ಬಡವರ ದೇಶ, ಎಂದು ಹೇಳುವ ಪರಿಸ್ಥಿತಿಯಿಂದ ಕೊರೋನಾ ಕಾಲದಲ್ಲಿ ವಿದೇಶಗಳಿಗೆ ಕೊರೋನಾ ಲಸಿಕೆಯನ್ನು ನೀಡುವ ಹಂತಕ್ಕೆ ಬೆಳೆಯಿತು. ಕೊರೋನಾ ಲಸಿಕೆ ಹೊಂದಿದ್ದ ದೇಶಗಳು ಹೆಚ್ಚಿನ ಹಣಕ್ಕೆ ಲಸಿಕೆಯನ್ನು ಮಾರಿದರೆ, ಭಾರತ ಮಾತ್ರ ಔಷಧಿಯನ್ನು ನಿರ್ಮಾಣ ವೆಚ್ಚದಲ್ಲೆ ನೀಡಿದ ಜಗತ್ತಿನ ಏಕೈಕ ದೇಶ ಎಂದು ಶ್ಲಾಘಿಸಿದರು. ಭಾರತ ಹಾವಾಡಿಗರ ದೇಶದಿಂದ ಮೌಸ್ ಹಿಡಿಯುವ ದೇಶವಾಗಿ ಮುಂದುವರಿದಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಧರ್ಮ ಜಾಸ್ತಿ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಹಾಗಾದರೆ ರಾಜಕೀಯದಲ್ಲಿ ಅಧರ್ಮ ಇರಬೇಕೇ? ಎಂದು ಮರು ಪ್ರಶ್ನೆ ಹಾಕಿದರು. ನಾವು ರಿಲೀಜನ್‌ನ್ನು ಧರ್ಮ ಎಂದು ಭಾಷಾಂತರಿಸಿಕೊಂಡಿದ್ದೆವೆ, ಆದರೆ ನಿಜವಾದ ಧರ್ಮದ ಅರ್ಥ ನಮ್ಮ ನಡೆ, ನುಡಿ, ಆಚಾರ, ವಿಚಾರವಾಗಿದೆ ಎಂದು ಸಮರ್ಥನೆ ನೀಡಿದರು.

ಕಾಲೇಜಿನ ಚಿಗುರು ವಿದ್ಯಾರ್ಥಿ ವೇದಿಕೆಯ ಸಂಯೋಜಕ ಶಶಾಂಕ ಪ್ರಸ್ತಾವಿಕವಾಗಿ ಮಾತಾನಾಡಿದರು. ಕಾರ‍್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಗನಾ ಲೋಕೇಶ್ ಸ್ವಾಗತಿಸಿ, ಕಿರಣ್ ವಂದಿಸಿ, ಅಂಕಿತಾ ಪರಾಡ್ಕರ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ

ಉಡುಪಿ, ಜ.20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರು ಜಿಲ್ಲಾ...

ಸಂಸ್ಕಾರಭರಿತ ಶಿಕ್ಷಣಕ್ಕೆ ಸೇವಾ ಸಂಗಮದ ಕಾರ್ಯ ಶ್ಲಾಘನೀಯ: ಕೆ.ಅನಂತಪದ್ಮನಾಭ ಐತಾಳ್

ಕೋಟ, ಜ.20: ಸೇವಾ ಸಂಗಮ ಶಿಶು ಮಂದಿರ ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ....

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...
error: Content is protected !!