Monday, November 25, 2024
Monday, November 25, 2024

ಚಿಕ್ಕನ್ ಖಾದ್ಯದಲ್ಲಿ ಹುಳವಿದೆ ಎಂದು ಅಪಪ್ರಚಾರ ಮಾಡಿದವರ ವಿರುದ್ದ ಒಂದು ಕೋಟಿ ಪರಿಹಾರ ಕೇಳಿ ಮಾನನಷ್ಟ ದಾವೆ ದಾಖಲು

ಚಿಕ್ಕನ್ ಖಾದ್ಯದಲ್ಲಿ ಹುಳವಿದೆ ಎಂದು ಅಪಪ್ರಚಾರ ಮಾಡಿದವರ ವಿರುದ್ದ ಒಂದು ಕೋಟಿ ಪರಿಹಾರ ಕೇಳಿ ಮಾನನಷ್ಟ ದಾವೆ ದಾಖಲು

Date:

ಮಂಗಳೂರು, ಜು. 30: ಮಂಗಳೂರಿನಲ್ಲಿ ಮುಖ್ಯ ಕಛೇರಿ ಹೊಂದಿದ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ದೇಶ ವಿದೇಶಗಳಲ್ಲಿಯೂ ತನ್ನ ಪ್ರಾಂಚೈಸಿಗಳನ್ನು ಒಳಗೊಂಡು ಆಹಾರ ಉದ್ಯಮದಲ್ಲಿ ಮಹತ್ತರ ಸ್ಥಾನದಲ್ಲಿರುವ ಸಂಸ್ಥೆಯ ತಿಸಿಸುಗಳ ವಿರುದ್ದ ಕೇರಳದ ಮಲಪ್ಪುರಂ ಮೂಲದ ಜಿಶಾದ್ ಎಂಬ ವ್ಯಕ್ತಿ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಒಡೆತನದ ಝಂಗುಸ್ ರೆಸ್ಟೊರೆಂಟಿನ ಚಿಕನ್ ಖಾದ್ಯದಲ್ಲಿ ಹುಳವಿದೆ ಎಂಬ ಸುಳ್ಳು ಪೂರಿತ ವೀಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ. ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಗಳು ಪರೀಕ್ಷೇ ನಡೆಸಿದಾಗ ಅದರಲ್ಲಿ ಯಾವುದೇ ಹುಳವಿಲ್ಲವೆಂಬುವುದು ಧೃಡಪಟ್ಟಿತ್ತು.

ಈ ಮೂಲಕ ಜಿಶಾದ್ ಎಂಬಾತನು ಸಂಸ್ಥೆಯ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸದ್ರಿ ಕೃತ್ಯ ಎಸಗಿದ ಬಗ್ಗೆ ಸಂಸ್ಥೆಯ ಗಮನಕ್ಕೆ ಬಂದಿರುವುದರಿಂದ ಜಿಶಾದ್ ನ ವಿರುದ್ದ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು ಸುಮಾರು ಒಂದು ಕೋಟಿ ರುಪಾಯಿ ಮಾನನಷ್ಟದ ದಾವೆ ಹೂಡಿದ್ದು, ಪ್ರತಿವಾದಿ ಜಿಶಾದ್ ಗೆ ಮಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀಶರು ದಾವೆಯನ್ನು ಪುರಸ್ಕರಿಸಿ ಪ್ರತಿವಾದಿಗೆ ಸಮನ್ಸ್ ಹೊರಡಿಸಲು ಆದೇಶಿಸಿರುತ್ತಾರೆ. ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಪರ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ವಕೀಲರಾಗಿರುವ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಇಸ್ಮಾಯಿಲ್ ಶಾಫಿ ಬೈಕಂಪಾಡಿ ದಾವೆಯನ್ನು ಹೂಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!