Sunday, January 19, 2025
Sunday, January 19, 2025

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಹಿಂದೂ ದೇವಾಲಯಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಹಿಂದೂ ದೇವಾಲಯಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

Date:

ಮಂಗಳೂರು, ಮೇ 31: ಫೆಬ್ರವರಿ 2024 ರಂದು ಅಬುದಾಬಿಯಲ್ಲಿ ಸಮರ್ಪಣೆಯಾಗಲಿರುವ ಅರಬ್ ರಾಷ್ಟ್ರದ ಪ್ರಥಮ ಬೃಹತ್ ಹಿಂದೂ ದೇವಸ್ಥಾನಕ್ಕೆ ಯೂಥ್ ಆಫ್ ಜಿ.ಎಸ್.ಬಿ ತಂಡ ಹಾಗೂ ತಮ್ಮೊಂದಿಗೆ ಆಗಮಿಸಿದ ಸುಮಾರು 130 ಜಿ.ಎಸ್.ಬಿ ಸಮುಯದಾಯದ ಮಂದಿ ಭೇಟಿ ನೀಡಿ ಮಂದಿರ ನಿರ್ಮಾಣಕ್ಕೆ ಉಪಯೋಗವಾಗುವ ಇಟ್ಟಿಗೆಗೆ ಪೂಜೆ ಸಲ್ಲಿಸಿ ದೇಣಿಗೆ ಸಮರ್ಪಿಸಿದರು. 2018 ರಲ್ಲಿ ಮಂದಿರ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ರೊಜೆಕ್ಟ್ ಕಾಮಗಾರಿಗೆ ಚಾಲನೆ ನೀಡಿದ್ದರು.

ಸುಮಾರು 55 ಸಾವಿರ ಚದರ ಕಿಮೀ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಹಿಂದೂ ಮಂದಿರದಲ್ಲಿ ಸ್ವಾಮಿ ನಾರಾಯಣ, ವೆಂಕಟರಮಣ, ರಾಮ, ಕೃಷ್ಣ, ಶಿವ, ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತದೆ. ಬ್ಯಾಪ್ಸ್ ಸಂಸ್ಥೆ ಮಂದಿರ ನಿರ್ಮಾಣದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು ಮಂದಿರದ ಆವರಣದಲ್ಲಿ ಧಾರ್ಮಿಕ ಪ್ರವಚನದ ಸಭಾಂಗಣ, ಕ್ರೀಡಾಂಗಣ, ಪವಿತ್ರ ನದಿಗಳ ತೀರ್ಥ ಒಳಗೊಂಡ ಕೆರೆ, ಯೋಗ ಮಂಟಪ, ಕಲಾ ಮಂಟಪ ಕೂಡ ನಿರ್ಮಾಣಗೊಳ್ಳಲಿದೆ.

ದೂರದ ಭಾರತದಿಂದ ಭಕ್ತಾದಿಗಳಾಗಿ ಭಾಗವಹಿಸಿದ ಯೂಥ್ ಆಫ್ ಜಿ.ಎಸ್.ಬಿ ತಂಡಕ್ಕೆ ಬ್ಯಾಪ್ಸ್ ಸಂಸ್ಥೆ ಮಂದಿರದ ಸಂಪೂರ್ಣ ಮಾಹಿತಿ ನೀಡಿತು. ಇದೇ ಸಂದರ್ಭದಲ್ಲಿ ಇಟ್ಟಿಗೆಗೆ ಪೂಜೆಯನ್ನೂ ನೆರವೇರಿಸಲಾಯಿತು. ಜೀವಮಾನದ ಅವಿಸ್ಮರಣೀಯ ಘಟನೆಗಳಲ್ಲಿ ಇದೂ ಒಂದಾಗಿದ್ದು ವಿದೇಶದಲ್ಲಿ ಅದು ಕೂಡ ಇಸ್ಲಾಂ ರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಏಕೈಕ ಬೃಹತ್ ಹಿಂದೂ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ನಮಗೆ ದೊರೆತ ದೊಡ್ಡ ಭಾಗ್ಯ ಎಂದು ಸಮುದಾಯದ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಸಂತೋಷ್ ಭಂಡಾರಿ, ಗೋಪಾಲಕೃಷ್ಣ ಭಟ್, ಸುಜಿತ್ ಬಾಳಿಗಾ ಹಾಗೂ ಇತರರು ಉಪಸ್ಥಿತರಿದ್ದರು. ಮೊದಲ ಅಂತರರಾಷ್ಟ್ರೀಯ ಜಿ.ಎಸ್.ಬಿ ಸಮ್ಮೇಳನದ ಅಂಗವಾಗಿ ದುಬೈಗೆ ಜಿ.ಎಸ್.ಬಿ ಸಮುದಾಯ ಪ್ರವಾಸ ಕೈಗೊಂಡಿದ್ದು ಈ ನಡುವೆ ಮಂದಿರಕ್ಕೆ ಭೇಟಿ ನೀಡಲಾಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!