Sunday, January 19, 2025
Sunday, January 19, 2025

ಹಿಂದೂ ಸಮಾಜದ ಒಗ್ಗಟ್ಟಿಗೆ ಜಾತಿ ಸಮುದಾಯದ ಸಂಘಟನೆ ಅಡಿಪಾಯವಿದ್ದಂತೆ: ಪುತ್ತಿಗೆ ಶ್ರೀ

ಹಿಂದೂ ಸಮಾಜದ ಒಗ್ಗಟ್ಟಿಗೆ ಜಾತಿ ಸಮುದಾಯದ ಸಂಘಟನೆ ಅಡಿಪಾಯವಿದ್ದಂತೆ: ಪುತ್ತಿಗೆ ಶ್ರೀ

Date:

ಕುಲಶೇಖರ, ಮೇ 23: ಮಣ್ಣಿನ ಮೂಲಕ ಕಲಶ ನಿರ್ಮಾಣ ಮಾಡುವ ಪ್ರಬುದ್ದ ಸಮುದಾಯ ಕುಲಾಲರದ್ದು. ಇದೊಂದು ಆದರ್ಶ ಸಮುದಾಯ. ಸಂಘಟನೆ ಅನ್ನುವುದು ಹಿಂದೂ ಸಮಾಜದ ಒಗ್ಗಿಟ್ಟಿನ ವೈಜ್ಞಾನಿಕ ವಿಧಾನ. ಹಿಂದೂ ಸಮಾಜದ ಒಗ್ಗಟ್ಟಿಗೆ ಜಾತಿ ಸಮುದಾಯದ ಸಂಘಟನೆ ಅಡಿಪಾಯ ಆಗಿದೆ. ದೇವರ ತಳಹದಿಯಲ್ಲಿ ಒಗ್ಗಟ್ಟಾಗಿ ಯಾವುದೇ ಕಾರ್ಯದಲ್ಲಿ ಮುಂದುವರಿದರೆ ಯಶಸ್ಸು ದೊರೆಯುತ್ತದೆ. ಅದು ಕುಲದೇವರ ದೇಗುಲ ನಿರ್ಮಾಣಕ್ಕೆ ದಾನಿಗಳಿಂದ ದೊರೆತ ಸಹಕಾರವೇ ಸಾಕ್ಷಿಯಾಗಿದೆ, ಕುಲದೇವರು ಮತ್ತು ಕುಲಗುರುಗಳ ಆಶೀರ್ವಾದ ಸಮುದಾಯದ ಎಲ್ಲರ ಮೇಲೆ ಇರಲಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಅವರು ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ತಿರುಪತಿಗೆ ಮುಡಿಪು ಹಣ ನೀಡುವಂತೆ, ಕುಟುಂಬದ ದೈವ ದೇವರ ವಾರ್ಷಿಕ ಭೇಟಿಯಂತೆ ಕುಲಕ್ಷೇತ್ರವಾದ ಶ್ರೀ ವೀರನಾರಾಯಣ ದೇವರ ಕ್ಷೇತ್ರಕ್ಕೆ ಎಲ್ಲ ಕುಲಾಲ ಬಾಂಧವರ ಭೇಟಿ ಆಗಿ ದರ್ಶನ ಮಾಡುವಂತಾಗಬೇಕು. ಮಗುವಿನ ತುಲಾಭಾರ ಸೇವೆ ಮಾಡಿಸುವ ಪರಿಪಾಠ ಬೆಳೆಯಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು.

ಕೂಡಿದ ಮತ್ತು ನಿರ್ಮಲ ಮನಸ್ಸಿನಿಂದ ಇಂತಹ ಒಂದು ಪುಣ್ಯದ ಸತ್ಕಾರ್ಯ ಮಾಡಲು ಅನುಗ್ರಹ ದೊರೆತ್ತಿದೆ. ಸಿಸಿ ಕೆಮರಾಗಳಿಗೆ ಹೆದರುವ ಜೀವನ ನಮ್ಮದಾಗದೇ ದೇವರ ಮೇಲೆ ಭಯಭಕ್ತಿಯಿಂದ ಸತ್ಯಧರ್ಮದ ನಡೆ ನಮ್ಮದಾಗಬೇಕು ಎಂದು ದ.ಕ.ಜಿ.ಪಂ. ಸಿಇಒ ಡಾ| ಕುಮಾರ್ ಐಎಎಸ್ ಹೇಳಿದರು.

ನಾಸಿಕ್ ತುಳುಸೇವಾ ಸಂಘದ ಅಧ್ಯಕ್ಷ ರಮಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ವೇ|ಮೂ| ವಾಸುದೇವ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ದ.ಕ. ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ, ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ, ಆರ್‌ಎಸ್‌ಎಸ್‌ನ ಡಾ. ವಾಮನ ಶೆಣೈ, ಆನಂದ ಶೆಟ್ಟಿ ಮುಂಬೈ, ಶ್ರೀನಿವಾಸ್ ಪಡೀಲ್, ಗಣೇಶ್ ಎಂ.ಪಿ., ಸುರೇಂದ್ರ, ಬೆಂಗಳೂರಿನ ಉದ್ಯಮಿ ಸೌಂದರ್ಯ ಮಂಜಪ್ಪ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ವಿಶ್ವನಾಥ್, ಗೋಪಾಲ ಬಂಗೇರ, ನ್ಯಾಯವಾದಿ ರಾಮಪ್ರಸಾದ್ ಎಸ್., ನಾರಾಯಣಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್, ಮಾಜಿ ಉಪಮಹಾಪೌರರು ರಾಜೇಂದ್ರ ಕುಮಾರ್, ದೊಡ್ಡಯ್ಯ ಮೂಲ್ಯ ಕಟೀಲು, ಉದ್ಯಮಿ ಬಾಲಕೃಷ್ಣ ಕುಂಜತ್ತೂರು, ಕಾಂತಿಶ್ ಸಿ. ಸಾಲ್ಯಾನ್ ಮುಂಬೈ, ಸುಂದರ ಬಿ. ಬಂಗೇರ, ಪಿ. ಮಹಾಬಲ ಚೌಟ, ರತ್ನಾ ಡಿ. ಕುಲಾಲ್ ಮುಂಬೈ, ಬೆಂಗಳೂರಿನ ಉದ್ಯಮಿ ಕೆ.ಎ. ಲಕ್ಷ್ಮಣ್, ಹೈಕೋರ್ಟ್ ನ್ಯಾಯವಾದಿ ಡಿ.ವಿ.ಆರ್. ಸ್ವಾಮಿ, ನಾಗೇಂದ್ರ ಕುಮಾರ್ ಜಪ್ಪಿನಮೊಗರು, ನವೀನ್ ಕುಮಾರ್ ಮಜಲು, ಮನೋಹರ್ ಕಿಣಿ, ಎಂ. ಜಯಶೀಲ ಪದವು, ಚಿತ್ರನಟಿ ಅಮೀತಾ ಸದಾಶಿವ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರವೀಣ್ ಬಸ್ತಿ, ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್ ಮುಂಬೈ, ಮಾಧವ ಕುಲಾಲ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ಸೌಮ್ಯ ಕೆ.ಎಸ್. ಪ್ರಾರ್ಥಿಸಿ, ಪ್ರವೀಣ್ ಬಸ್ತಿ ಸ್ವಾಗತಿಸಿ, ಪ್ರಾಸ್ತವಿಸಿದರು. ಅಚಲಾ ನಾಗೇಶ್ ನಿರೂಪಿಸಿ, ದಿನೇಶ್ ಕುಲಾಲ್ ವಂದಿಸಿದರು.

ದಾನಿಗಳಿಗೆ ಸಮ್ಮಾನ: ದಾನಿಗಳಾದ ಕಾಂತೇಶ್ ಸಿ. ಸಾಲ್ಯಾನ್ ದಂಪತಿ, ನವೀನ್ ಕುಲಾಲ್ ಕುಳಾಯಿ, ಲಕ್ಷ್ಮಣ ಎ. ಸಾಲ್ಯಾನ್ ಮುಂಬೈ, ಮಯೂರ್ ಉಳ್ಳಾಲ್ ದಂಪತಿ, ದಿನೇಶ್ ಕುಲಾಲ್ ಮುಂಬೈ ದಂಪತಿ, ಮಾದವ ಕುಲಾಲ್, ಬಾಲಕೃಷ್ಣ ಕುಂಜತ್ತೂರು ಅವರನ್ನು ಸಮ್ಮಾನಿಸಲಾಯಿತು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!