ಮಂಗಳೂರು, ಮೇ 12: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 2023 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಕೆನರಾ ಹೈ ಸ್ಕೂಲ್ (ಸಿಬಿಎಸ್ಇ ) ಶಾಲೆಯು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. 120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣಗೊಂಡು 100% ಫಲಿತಾಂಶ ಬಂದಿದೆ.
117 ವಿದ್ಯಾರ್ಥಿಗಳು 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿದ್ದಾರೆ. 10 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾರಂಗ ರಾವ್ ಇನೊಳಿ(97%), ದಿಯಾ ಎನ್ ಕಾಮತ್(96.8%), ಜಾಹ್ನವಿ ಶೆಣೈ(96.6%), ವಾರುಣಿ ಸುರೇಶ್(96%), ಆರ್ಯನ್ ಎಂ(96%), ವಿ ಸಾಯಿ ವಿಜ್ವಲ್ ಕಾರ್ತಿಕ್(96%), ಸತ್ಯಪ್ರಸಾದ್ ಜಿ ಪೈ(95.8%), ಕೆ ಆಕಾಶ್ ಎಂ ರಾವ್(95.4%), ಕಾತ್ಯಾಯಿನಿ ಎಸ್ ಪೈ(95.4%), ತುಳಸಿ ಹರಿಪ್ರಸಾದ್ (95.4%) ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
24 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು, 23 ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚು, 60 ವಿದ್ಯಾರ್ಥಿಗಳು 60%ಕ್ಕಿಂತ ಹೆಚ್ಚು, ಹಾಗು 3 ವಿದ್ಯಾರ್ಥಿಗಳು 48% ಗಿಂತ ಹೆಚ್ಚು ಪಡೆದುಕೊಂಡಿದ್ದಾರೆ.2015 ರ ಈ ಸಂಸ್ಥೆಯ ಮೊದಲ ಬ್ಯಾಚ್ 100 ಶೇಕಡ ಫಲಿತಾಂಶ ಪಡೆದುಕೊಂಡಿದ್ದು ಅದರ ನಂತರ ಪ್ರತಿವರ್ಷ ಕೂಡ ಅತ್ಯುತ್ತಮ ಸಾಧನೆಯನ್ನು ಮಾಡುತ್ತಾ ಬಂದಿದೆ. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವರ್ಗವನ್ನು ಕೆನರಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.