ಬಂಟ್ವಾಳ, ಮೇ 8: ಯುವಕ ಮಂಡಲ (ರಿ.) ಇರಾ ಇದರ ವಾರ್ಷಿಕ ಮಹಾಸಭೆ ಇರಾ ಯುವಕ ಮಂಡಲದ ಕಛೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಹಿರಿಯ ಸದಸ್ಯರಾದ ಜಯರಾಮ್ ಪೂಜಾರಿ ಸೂತ್ರಬೈಲು ವಹಿಸಿದ್ದರು. ಸಂಘದ ಕಾರ್ಯದರ್ಶಿಯಾದ ಭರತ್ ರಾಜ್ ರೈ 2022-23 ರ ಆಯವ್ಯಯಗಳನ್ನು ಮಂಡಿಸಿದರು.
2023-24 ರ ಅವಧಿಗೆ ಅಧ್ಯಕ್ಷರಾಗಿ ಗಣೇಶ್ ಕೊಟ್ಟಾರಿ ಸಂಪಿಲ, ಉಪಾಧ್ಯಕ್ಷರಾಗಿ ದಿನೇಶ್ ಪಕ್ಕಳ ತಾಳಿತ್ತಬೆಟ್ಟು, ಕಾರ್ಯದರ್ಶಿಯಾಗಿ ಜಯರಾಜ್ ಶೆಟ್ಟಿ ಕುಂಡಾವು, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ವೈ.ಬಿ., ಕೋಶಾಧಿಕಾರಿಯಾಗಿ ಶೈಲೇಶ್ ರೈ ಸಂಪಿಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತೇಶ್ ಶೆಟ್ಟಿ ಸಂಪಿಲ, ಕ್ರೀಡಾ ಕಾರ್ಯದರ್ಶಿಯಾಗಿ ಅದ್ರಾಮ ಡಿ., ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಶಾಶ್ವತ್ ಬಾವ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಸಂಪಿಲ ಇವರನ್ನು ನೂತನ ಪಧಾದಿಕಾರಿಗಳನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ಇರಾ, ಹಿರಿಯ ಸದಸ್ಯರುಗಳಾದ ವೈ ಬಿ ಸುಂದರ್, ಸುರೇಶ್ ಕೊಟ್ಟಾರಿ, ವಾಮನ ಪೂಜಾರಿ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.