Thursday, February 27, 2025
Thursday, February 27, 2025

ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯ: ಬಾಲಕೃಷ್ಣ ಶೆಟ್ಟಿ

ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯ: ಬಾಲಕೃಷ್ಣ ಶೆಟ್ಟಿ

Date:

ವಿದ್ಯಾಗಿರಿ, ಜ. 28: ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅಗತ್ಯವಾಗಿದ್ದು, ಆರ್ಥಿಕ ಸಾಕ್ಷರತೆಯಲ್ಲಿ ಸ್ವೀಡನ್ ಹಾಗೂ ಡೆನ್ಮಾರ್ಕ್ ಮುಂಚೂಣಿಯಲ್ಲಿವೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಎಂಕಾಂ ಎಚ್‌ಆರ್‌ಡಿ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣದ ಜೊತೆಗೆ ಒಳ್ಳೆಯ ಸಂಬಂಧ ಇರಿಸಿಕೊಳ್ಳಿ. ಹಣ ಗಳಿಸುವ ಆಸೆಯಿದ್ದರೆ, ತಕ್ಕಂತೆ ಶ್ರಮ ಪಡಬೇಕು. ಆರ್ಥಿಕ ವ್ಯವಹಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳವುದರಿಂದ ಸಿಗುವ ಲಾಭವು ಅತ್ಯುತ್ತಮವಾಗಿದೆ. ನಿಮ್ಮ ಹಣದ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದರು.

ಉಪನ್ಯಾಸ ನೀಡಿದ ಸೆಬಿ ಸಂಸ್ಥೆಯ ನವೀನ್ ರೇಗೊ ಮಾತನಾಡಿ, ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಹಣದುಬ್ಬರ ಜಾಸ್ತಿಯಿದೆ. ಕೆಲವೊಮ್ಮೆ ಲಾಭ ಜಾಸ್ತಿ ಅಥವಾ ಕಡಿಮೆ ಇರಬಹುದು. ಹಾಗೆಯೇ ಒಂದಿಷ್ಟು ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಆದರೆ, ದುಪ್ಪಟ್ಟು ಲಾಭ ದೊರೆಯುತ್ತದೆ ಎಂದು ಮೋಸ ಮಾಡುವವರು ಇದ್ದಾರೆ. ಅಂತಹ ಆಮಿಷಕ್ಕೆ ಸಿಲುಕದೇ ಹಣಕಾಸಿನ ಪರಿಸ್ಥಿತಿಯನ್ನು ನಿಭಾಯಿಸುವುದು ಮುಖ್ಯ. ಯಾವುದೇ ಕೆಲಸವನ್ನು ಸಂಪೂರ್ಣ ಮಾಹಿತಿ ಇಲ್ಲದೆ ಕೈಗೊಳ್ಳಬಾರದು ಎಂದರು.

ಹೂಡಿಕೆ ಪ್ರಾರಂಭ ಯಾವಾಗ ಕುರಿತು ಫ್ರಾಂಕ್ಲಿನ್ ಟೆಂಪ್ಲೆಷನ್ ಇಂಡಿಯಾ ಸಂಸ್ಥೆಯ ಹಿರಿಯ ಶಾಖಾ ವ್ಯವಸ್ಥಾಪಕ ಲಿಯೋ ಅಮಲ್ ಎ ಮತ್ತು ವೈಯಕ್ತಿಕ ಹೂಡಿಕೆ ಯೋಜನೆ ಕುರಿತು ಸರ್ವಿಸ್ ಪ್ರೊಫೆಷನಲ್‌ನ ವ್ಯೋನಲ್ ಡಿಸೋಜ ಉಪನ್ಯಾಸ ನೀಡಿದರು. ಎಂಕಾಂ ಎಚ್‌ಆರ್‌ಡಿ ವಿಭಾಗದ ಸಂಯೋಜಕಿ ಹಾಗೂ ಕಾರ‍್ಯಕ್ರಮದ ಸಂಯೋಜಕಿ ಶಾಜಿಯಾ ಕಾನುಮ್ ಮತ್ತು ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಇದ್ದರು. ವಿದ್ಯಾರ್ಥಿನಿ ವಿದ್ಯಾ ಸ್ವಾಗತಿಸಿ, ಸಾನಿಧ್ಯಾ ಪ್ರಾರ್ಥನೆ ಹಾಡಿದರು. ಅಕ್ಷತಾ ವಂದಿಸಿದರು ಮತ್ತು ರಫಿಯಾ, ಅನುಶ್ರೀ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ...

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...
error: Content is protected !!