Friday, November 1, 2024
Friday, November 1, 2024

ಅಭಿವ್ಯಕ್ತಿ ಮಾನವೀಯ ಮೌಲ್ಯಗಳಿಂದ ತುಂಬಿರಲಿ: ವೇಣುಗೋಪಾಲ ಶೆಟ್ಟಿ

ಅಭಿವ್ಯಕ್ತಿ ಮಾನವೀಯ ಮೌಲ್ಯಗಳಿಂದ ತುಂಬಿರಲಿ: ವೇಣುಗೋಪಾಲ ಶೆಟ್ಟಿ

Date:

ವಿದ್ಯಾಗಿರಿ: ಸ್ವಾಭಿಮಾನ, ಸಾಮರಸ್ಯ ಸೇರಿದಂತೆ ಮಾನವೀಯ ಮೌಲ್ಯಗಳಿಂದ ಅಭಿವ್ಯಕ್ತಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಕೆ. ಹೇಳಿದರು.

ಆಳ್ವಾಸ್ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ-೨೦೨೩’ ವೇದಿಕೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಕೌಶಲ ಇದ್ದರೆ ಸಾಲದು. ಅದರ ಅನುಷ್ಠಾನಕ್ಕೆ ಜ್ಞಾನವೂ ಮುಖ್ಯ ಎಂದ ಅವರು, ಕನ್ನಡ ಭಾಷೆಯು ದೇಸಿತನವನ್ನು ಹೊಂದಿದೆ. ಹಿರಿಯರು ಅಭಿವ್ಯಕ್ತಿಯ ಮೂಲಕವೇ ನಾಡನ್ನು ಕಟ್ಟಿದ್ದಾರೆ ಎಂದರು.

ವೈವಿಧ್ಯತೆಯಲ್ಲಿ ಏಕತೆಯು ದೇಶದ ವಿಶೇಷತೆ. ಅದನ್ನು ನಾವೆಲ್ಲ ಪಾಲಿಸಿ, ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಜೊತೆಯಾಗಿ ಬದುಕುವ ಸಹನೀಯ ವಾತಾವರಣ ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಯಶಸ್ವಿಯಾಗಿ ಬದುಕಲು ಎದುರಿಸುವ, ಮಾತನಾಡುವ, ವಿರೋಧಿಸುವ ಎಲ್ಲ ಪ್ರವೃತ್ತಿಗಳು ಬೇಕಾಗುತ್ತವೆ. ಆದರೆ, ಅವುಗಳೆಲ್ಲವನ್ನೂ ಸಹನೆಯಿಂದ ಅನುಸರಿಸಬೇಕು ಎಂದರು.

ಭಾಷೆಯು ನಮ್ಮನ್ನು ಬೆಸೆಯುತ್ತದೆ. ಬದುಕನ್ನು ಕಟ್ಟುತ್ತದೆ. ಉತ್ತಮ ಭಾಷಾ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಪತ್ರಕರ್ತನಾಗಲು ಸಾಧ್ಯ. ಓದು ಮತ್ತು ಸ್ಪಂದನೆ ಅವಶ್ಯ ಎಂದರು.

ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಕೌಶಲಕ್ಕೆ ವಿಭಾಗದ ಅಭಿವ್ಯಕ್ತಿ ವೇದಿಕೆಯು ಅವಕಾಶ ಕಲ್ಪಿಸಿದೆ ಎಂದರು. ಅಭಿವ್ಯಕ್ತಿ-೨೦೨೩ ವೇದಿಕೆಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಭಿವ್ಯಕ್ತಿ ವೇದಿಕೆಯ ಸಂಯೋಜಕಿ ದಿಶಾ ಗೌಡ, ಸಹ ಸಂಯೋಜಕ ವೈಶಾಖ್ ಮಿಜಾರು ಇದ್ದರು.

ಅಕ್ಷಯ್ ಕುಮಾರ್ ವಿದ್ಯಾರ್ಥಿ ವೇದಿಕೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಮರ್ ಫಾರುಕ್ ಅತಿಥಿಗಳನ್ನು ಪರಿಚಯಿಸಿದರು. ಪವಿತ್ರಾ ನಿರೂಪಿಸಿದರು. ಚಿದಾನಂದ ಸ್ವಾಗತಿಸಿ, ಶಿಲ್ಪಾ ಕುಲಾಲ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಡಿಯಲ್ಲಿ ಒಂದಿಂಚು ಭೂಮಿಗೂ ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ಕಚ್, ಅ.31: ಇಂದು ದೇಶವು ಗಡಿಯಲ್ಲಿ ಒಂದು ಇಂಚು ಭೂಮಿಗೂ ರಾಜಿ...

ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಪನ್ನ

ಉಡುಪಿ, ಅ.31: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಹಾಗೂ ಉಡುಪಿ...

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

ಕೋಟ, ಅ.31: ಬದುಕಿನ ಆಯಾಮದಲ್ಲಿ ಪುನೀತ್ ರಾಜಕುಮಾರ್ ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು...

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ, ಅ.31: ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ...
error: Content is protected !!