Wednesday, September 25, 2024
Wednesday, September 25, 2024

ಕೆನರಾ ಹೈಸ್ಕೂಲ್‌- ‘ಕನ್ಸರ್ವೇಷನ್ ಲ್ಯಾಬೊರೇಟರಿ’ ಉದ್ಘಾಟನೆ

ಕೆನರಾ ಹೈಸ್ಕೂಲ್‌- ‘ಕನ್ಸರ್ವೇಷನ್ ಲ್ಯಾಬೊರೇಟರಿ’ ಉದ್ಘಾಟನೆ

Date:

ಮಂಗಳೂರು: ನಗರದ ಕೆನರಾ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾಗಿದ್ದ ‘ಕೆನರಾ ಮ್ಯೂಸಿಯಂ’ ಪುನಶ್ಚೇತನ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ನೂತನವಾಗಿ ಸ್ಥಾಪಿಸಲಾದ ‘ಕನ್ಸರ್ವೇಷನ್ ಲ್ಯಾಬೊರೇಟರಿ’ಯ ಉದ್ಘಾಟನಾ ಕಾಯಕ್ರಮ ಶನಿವಾರ ನಡೆಯಿತು.

ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್‌ನ ಚಯರ್‌ಮ್ಯಾನ್ ಟಿ.ವಿ.ಮೋಹನ್‌ದಾಸ್ ಪೈ ಅವರು ನೂತನ ಪ್ರಯೋಗಾಲಯ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನವೇ ಕೆನರಾ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ದೇಶದ ಜನರಿಗೆ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವ ಆಶಯದಿಂದ ಶಾಲಾ ಕಾಲೇಜು ಆಗಿನ ಕಾಲದಲ್ಲಿ ಆರಂಭವಾಗಿದೆ.

ಕೆನರಾ ಸಂಸ್ಥೆ ನಡೆದು ಬಂದ ಹೆಜ್ಜೆಯನ್ನು ಹಾಗೂ ಹಿಂದಿನ ಕಾಲದ ನೆನಪು-ವಸ್ತುಗಳನ್ನು ಮ್ಯೂಸಿಯಂನಲ್ಲಿ ಸಂರಕ್ಷಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಜೀವಂತ ಚರಿತ್ರೆ ಅತೀ ಅಗತ್ಯ. ದೇಶದ ಅಮೂಲ್ಯ ವಸ್ತುಗಳನ್ನು ಮ್ಯೂಸಿಯಂನಲ್ಲಿ ಇಟ್ಟು ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಕೆನರಾ ಶಾಲೆಯ ಹುಟ್ಟು ಹಾಗೂ ನಡೆದುಬಂದ ಹೆಜ್ಜೆಗಳ ಕಥೆಗಳನ್ನು ಕೇಳಿ ವಿದ್ಯಾರ್ಥಿಗಳು ಪ್ರೇರೇಪಣೆ ಪಡೆಯುತ್ತಾರೆ ಎಂದರು.

ಪ್ರಮುಖರಾದ ರವೀಂದ್ರ ಪೈ, ಪ್ರದೀಪ್ ಜಿ.ಪೈ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ ಕಾಮತ್, ಕಾರ್ಯದರ್ಶಿ ರಂಗನಾಥ್ ಭಟ್, ಉಪಾಧ್ಯಕ್ಷ ಪದ್ಮನಾಭ ಪೈ ಹಾಗೂ ಕೆನರಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ಪ್ರಪ್ರಥಮ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರ ಲೋಕಾರ್ಪಣೆ

ಬೆಂಗಳೂರು, ಸೆ.25: ರಾಜ್ಯದ ಪ್ರಪ್ರಥಮ 370 ಮೆಗಾವ್ಯಾಟ್‌ ಸಾಮರ್ಥ್ಯದ ನೈಸರ್ಗಿಕ ಅನಿಲ...

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...
error: Content is protected !!