ಮಣಿಪಾಲ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕೈಮಗ್ಗ ದಿನದ ಪ್ರಯುಕ್ತ ಕೈಮಗ್ಗ ಉದ್ದಿಮೆಯಿಂದ ಪರಿಸರಕ್ಕಿರುವ ಲಾಭಗಳು ಕುರಿತು ಮಾತುಕತೆ ಕಾರ್ಯಕ್ರಮ ಆಗಸ್ಟ್ 8ರಂದು ಮಧ್ಯಾಹ್ನ 2 ಗಂಟೆಗೆ ರೇಡಿಯೋ ಮಣಿಪಾಲ್ 90.4 Mhz ಇದರಲ್ಲಿ ಪ್ರಸಾರವಾಗಲಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿಯ ಉಪ ಪರಿಸರಾಧಿಕಾರಿ ಪ್ರಮೀಳ, ಕೈಮಗ್ಗ ನೇಕಾರರಾದ ಭೋಜ ಪೂಜಾರಿ ಮಾರ್ಪಳ್ಳಿ, ನೇಕಾರರ ಸೇವಾ ಸಹಕಾರಿ ಸಂಘದ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಸೇರಿಗಾರ್ ಪಾಲ್ಗೊಳ್ಳಲಿದ್ದಾರೆ ಎಂದು ರೇಡಿಯೋ ಮಣಿಪಾಲದ ಪ್ರಕಟಣೆ ತಿಳಿಸಿದೆ.