Wednesday, January 22, 2025
Wednesday, January 22, 2025

ಆಸ್ಟಿನ್ ಮಹಾನಗರಲ್ಲಿ ಇಂದು ಸಂಭ್ರಮ

ಆಸ್ಟಿನ್ ಮಹಾನಗರಲ್ಲಿ ಇಂದು ಸಂಭ್ರಮ

Date:

ಉಡುಪಿ: ಭಕ್ತ ಜನರ ಅಪೇಕ್ಷೆಯ ಮೇರೆಗೆ ಆಸ್ಟಿನ್ ಮಹಾನಗರಕ್ಕೆ ಆಗಮಿಸಿದ ಪೂಜ್ಯ ಶ್ರೀಪಾದರು ಕಳೆದ ಹಲವು ವರ್ಷಗಳಿಂದ ಇಲ್ಲಿಯ ಆಸ್ತಿಕ ಜನರಲ್ಲಿರುವ ಉತ್ಸಾಹ, ಭಕ್ತಿ ಭಾವಗಳನ್ನು ಗಮನಿಸಿ ಅವರ ಅಪೇಕ್ಷೆಯಂತೆ, ಅವರ ಸಾಧನೆಗಳಿಗೆ ಅನುಕೂಲವಾಗಲು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗವಂತೆ ಭವ್ಯ ಶ್ರೀಕೃಷ್ಣ ಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಘೋಷಿಸಿದರು.

ತತ್ಪೂರ್ವವಾಗಿ ಸಧ್ಯದಲ್ಲಿಯೇ ಅನುಕೂಲವಾಗಲೆಂದು ಅರ್ಚಕರನ್ನೊಳಗೊಂಡಂತೆ ಶ್ರೀ ವೆಂಕಟಕೃಷ್ಣ ವೃಂದಾವನವನ್ನು ಪ್ರಾರಂಭಿಸಲು ಜಾಗವೊಂದನ್ನು ಆಯ್ಕೆ ಮಾಡಲಾಯಿತು.

ಆಸ್ತಿಕ ಜನರಿಂದಾಗಿ ಆಸ್ಟಿನ್ ಎಂದು ಹೆಮ್ಮೆಯಿಂದ ಕರೆಸಿಕೊಳ್ಳುವ ಈ ನಗರದಲ್ಲಿರುವ ಭಕ್ತ ಸಮೂಹವು ಶ್ರೀಗಳವರ ಈ ಮಹಾಕಾರ್ಯಕ್ಕೆ ತನು ಮನ ಧನ ಸಹಕಾರ ನೀಡಿ ಸಂಪೂರ್ಣವಾಗಿ ಬೆಂಬಲಿಸಿತು.

ಇದರಿಂದಾಗಿ ವಿಶ್ವದಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಸಾರದಲ್ಲಿ ನಿರತರಾಗಿರುವ ಶ್ರೀಪಾದರ ಈ ಅಭಿಯಾನದಲ್ಲಿ ಅಮೇರಿಕದ ಹತ್ತನೆಯ ಶ್ರೀಕೃಷ್ಣ ಮಂದಿರವು ಆಸ್ಟಿನ್ ನಗರದಲ್ಲಿ ಮೂಡಿಬಂದಂತಾಯಿತು.

2024 ರ ಜನವರಿ 18ರಂದು ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯ ದೀಕ್ಷಿತರಾಗುವ ಪೂಜ್ಯ ಶ್ರೀಗಳವರು ಆಸ್ಟಿನ್ ನಲ್ಲಿ ದಶಮ ಮಂದಿರದ ನಿರ್ಮಾಣದ ಮೂಲಕ ಪರಿಪೂರ್ಣರಾದರೆಂದು ನಗರದ ಭಕ್ತರು ಹರ್ಷಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಬೃಂದಾವನದಿಂದ ಉಡುಪಿಯೆಡೆ’ ಸಾಂಝಿ ಕಲಾಕೃತಿಗಳ ಪ್ರದರ್ಶನ

ಉಡುಪಿ, ಜ.22: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು...

ಜ.23: (ನಾಳೆ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿಗೆ

ಉಡುಪಿ, ಜ.22: ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು...

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...
error: Content is protected !!