Tuesday, October 15, 2024
Tuesday, October 15, 2024

ರಾಷ್ಟ್ರ‍ೀಯ ಕ್ರೀಡಾ ದಿನ-ರಕ್ತದಾನ ಶಿಬಿರ

ರಾಷ್ಟ್ರ‍ೀಯ ಕ್ರೀಡಾ ದಿನ-ರಕ್ತದಾನ ಶಿಬಿರ

Date:

ಮಲ್ಪೆ: ರಾಷ್ಟ್ರ‍ೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ದೈಹಿಕ ಶಿಕ್ಷಣ ವಿಭಾಗ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ (ರಿ.), ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ, ಉಡುಪಿ ಜಿಲ್ಲಾ ಅಮೆಚೂರ್ ಅತ್ಲೆಟಿಕ್ ಅಸೋಸಿಯೇಶನ್ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಸಂಘಟಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಯಪ್ಪ ಕೋಟ್ಯಾನ್ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳು ಗೋಪಾಲ ಸಿ. ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ಮಲ್ಪೆ ಇದರ ಅಧ್ಯಕ್ಷರಾದ ಕೃಷ್ಣನಾಂದ ಮಲ್ಪೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದಯಾನಂದ ಶೆಟ್ಟಿ , ಕ್ರೀಡಾ ಯುವಜನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಅಮೆಚೂರ್ ಅತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ಕೆಂಪರಾಜ್, ಮಣಿಪಾಲ ರಕ್ತನಿಧಿಯ ಡಾ. ಶಮ್ಮೀಶಾಸ್ತ್ರಿ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುರೇಶ್ ರೈ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಡಾ. ರಾಮಚಂದ್ರ ಪಾಟ್ಕರ್ ಸ್ವಾಗತಿಸಿ, ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಭಾರತದ ಹಾಕಿ ಕ್ರೀಡೆಯ ಧ್ಯಾನ್‌ಚಂದ್ ರವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಕೀರ್ತಿಶೇಷ ಲೋಕನಾಥ ಬೋಳಾರ್ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ’ ಉದ್ಘಾಟನೆ

ವಿದ್ಯಾಗಿರಿ, ಅ.14: ‘ಕಠಿಣ ಪರಿಶ್ರಮ, ಶ್ರಮದಲ್ಲಿನ ಭಕ್ತಿ, ಸಮರ್ಪಣಾ ಭಾವ ಮತ್ತು...

ಮನೆಗಳ ಹಸ್ತಾಂತರ

ಬೆಂಗಳೂರು, ಅ.14: ರಾಜೀವ್ ಗಾಂಧಿ ವಸತಿ ನಿಗಮದಿಂದ 135 ಕೋಟಿ ರೂ....

ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಉಡುಪಿ, ಅ.14: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 15 ರಿಂದ 17...

ಸೌತ್‌ ಝೋನ್‌ ಜೂನಿಯರ್‌ ಅತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಗೆ ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿ ಚಿರಾಗ್‌ ಸಿ ಪೂಜಾರಿ ಆಯ್ಕೆ

ಉಡುಪಿ, ಅ.14: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾನಗರದ ಪ್ರಥಮ ವಿಜ್ಞಾನ...
error: Content is protected !!