ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕೈ ಮಗ್ಗದ ಸಮುದಾಯದವರನ್ನು ಸನ್ಮಾನಿಸುವುದು ಹಾಗೂ ಅವರ ಜನಸಮುದಾಯಕ್ಕೆ ಕೊಡುಗೆ ಹಾಗೂ ದೇಶದ ಆರ್ಥಿಕ ಉನ್ನತಿಗೆ ಅವರ ಕೊಡುಗೆಯ ಬಗ್ಗೆ ನೆನಪಿಸುವ ದಿನವೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ.
ಪ್ರತಿ ವರ್ಷ ಆಗಸ್ಟ್ ಏಳರಂದು ದೇಶ ವ್ಯಾಪಿ ’ಸ್ವದೇಶಿ ಚಳವಳಿ 1905’ ನೆನಪಿನಲ್ಲಿ ಆಚರಿಸಲಾಗುತ್ತದೆ ಎಂದು ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷರಾದ ಉಮೇಶ್ ನಾಯಕ್ ಕೈಮಗ್ಗದ ದಿನಾಚರಣೆಯ ಅಂಗವಾಗಿ ಕಲ್ಯಾಣಪುರ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಆವರಣದಲ್ಲಿ ಕೈಮಗ್ಗದ ಸದಸ್ಯರನ್ನು ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇವರಾಯ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಕಾರ್ಯದರ್ಶಿ ಗೀತಾ ವಾದಿರಾಜ ರಾವ್ ಸ್ವಾಗತಿಸಿ, ವಂದಿಸಿದರು. ರಮಾನಂದ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್, ವಾದಿರಾಜ ರಾವ್, ಶ್ರೀನಿಧಿ ರಾವ್, ಶೋಭಿತಾ ರಾವ್, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು.