ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿದ ಹಲವು ನಿರ್ಭಂದಗಳಿ0ದ, ದೈನಂದಿನ ಸಂಪಾದನೆಯನ್ನು ನಂಬಿಕೊಂಡಿದ್ದ ಅಸಂಖ್ಯಾತ ಕೂಲಿ ಕಾರ್ಮಿಕರಿಗೆ, ಜೀವನ ನಿರ್ವಹಣೆಗೆ ತೊಂದರೆಗಳಾದವು, ಆದರೆ ಈ ಸಮಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಸಾಕಷ್ಟು ಕಾರ್ಮಿಕರು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದು, ಹೆಚ್ಚಿನ ಯುವಕರು ಮನೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗದ ಜನರನ್ನು ಹಾಗೂ ಊರು ಸೇರಿರುವ ನಗರವಾಸಿಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗ ಭಾಗ್ಯ ಕರುಣಿಸಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ, ಜಿಲ್ಲೆಯ ಕೂಲಿ ಕಾರ್ಮಿಕರಿಗೆ, ಒಟ್ಟು 10,632 ಕುಟುಂಬಗಳ 18,503 ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಒದಗಿಸಲಾಗಿದ್ದು, 3046 ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ, 955.36 ಲಕ್ಷ ರೂ ಗಳನ್ನು ಕೂಲಿ ಹಾಗೂ 203.04 ಲಕ್ಷ ರೂ ಗಳನ್ನು ಸಾಮಗ್ರಿ ಖರೀದಿಗಾಗಿ ವೆಚ್ಚ ಮಾಡಲಾಗಿದೆ. 103 ಕೆರೆ ಹೂಳೆತ್ತುವ ಕಾಮಗಾರಿ, 152 ತೋಡು ಹೂಳೆತ್ತುವ ಕಾಮಗಾರಿ, 982 ನೀರಾವರಿ ಬಾವಿ, 855 ಬಚ್ಚಲು ಗುಂಡಿ, 326 ದನದ ಕೊಟ್ಟಿಗೆ, 44 ಅಡಿಕೆ, ತೆಂಗು, ಮಲ್ಲಿಗೆ ಮುಂತಾದ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಸಾಲಿನಲ್ಲಿ ಹೊಸದಾಗಿ 3213 ಕುಟುಂಬಗಳಿಗೆ ಉದ್ಯೋಗ ಚೀಟಿಯನ್ನು ವಿತರಿಸಲಾಗಿದೆ. ಸ್ವಂತ ಉದ್ಯೋಗ, ಸ್ವಾವಲಂಬಿ ಬದುಕು ನಡೆಸಲು ಆಸಕ್ತಿ ಇರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ವೈಯುಕ್ತಿಕ ಕಾಮಗಾರಿಗಳನ್ನು ಕೈಗೊಂಡು ಸ್ವಂತ ಬದುಕು ಕಟ್ಟಿಕೊಳ್ಳಲು ಅವಕಾಶವಿರುತ್ತದೆ. ಹೈನುಗಾರಿಕೆಯಡಿ ಆಸಕ್ತಿ ಇರುವವರು ದನದ ಹಟ್ಟಿ, ಕೋಳಿ, ಹಂದಿ, ಆಡು, ಕುರಿ ಶೆಡ್ಡುಗಳನ್ನು ನಿರ್ಮಾಣ ಮಾಡಿಕೊಳ್ಳಲು ಯೋಜನೆಯಡಿ ಅವಕಾಶವಿರುತ್ತದೆ. ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಅಡಿಕೆ, ತೆ0ಗು, ಗೇರು, ಕೋಕೋ, ಕರಿಮೆಣಸು, ಮಲ್ಲಿಗೆ, ಪೌಷ್ಟಿಕ ತೋಟ ನಿರ್ಮಾಣ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿರುತ್ತದೆ. ಅಡಿಕೆ, ತೆ0ಗು ಪುನಶ್ಚೇತನ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಕೃಷಿ ಪೂರಕವಾಗಿ ಎರೆಹುಳು ತೊಟ್ಟಿ, ನೀರಾವರಿ ಬಾವಿ, ಕೃಷಿ ಹೊ0ಡ ಕಾಮಗಾರಿಗಳಿಗೂ ಅವಕಾಶವಿರುತ್ತದೆ. ರೈತರು ತಮ್ಮ ಜಮೀನಿನಲ್ಲಿ ಮಹಾಗನಿ, ಸಾಗುವಾನಿ, ಹಲಸು, ನೇರಳೆ, ಮಾವು, ಅತ್ತಿ, ನುಗ್ಗೆ ಮು0ತಾದ ಅರಣ್ಯ ಗಿಡಗಳನ್ನು ಬೆಳೆಸಲು ಅವಕಾಶವಿರುತ್ತದೆ.
ಮನೆಯಲ್ಲಿ ಸ್ನಾನ ಮಾಡಿದ ನೀರು, ಪಾತ್ರೆ,ಬಟ್ಟೆ ತೊಳೆದ ನೀರನ್ನು ಬಿಡಲು ಬಚ್ಚಲು ಗು0ಡಿಯನ್ನು ನಿರ್ಮಿಸಲು ಯೋಜನೆಯಡಿ ಅವಕಾಶವಿರುತ್ತದೆ. ನೀರು ಸ0ರಕ್ಷಣೆಯನ್ನು ಕೈಗೊಳ್ಳಲು ರೈತರು ತಮ್ಮ ಕೊಳವೆ ಬಾವಿಗಳಿಗೆ ಜಲಮರುಪೂರಣ ಘಟಕಗಳನ್ನು ನಿರ್ಮಿಸಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯ 2021-22 ನೇ ಸಾಲಿನ ಅನುಷ್ಟಾನದಲ್ಲಿ ಉಡುಪಿ ಜಿಲ್ಲೆ ಗುರಿ ಮೀರಿ ಪ್ರಗತಿಯನ್ನು ಸಾಧಿಸಿದೆ. ಈ ಆರ್ಥಿಕ ಸಾಲಿನಲ್ಲಿ ಒಟ್ಟು 6.70 ಲಕ್ಷ ಮಾನವ ದಿನಗಳ ಗುರಿ ಇದ್ದು ಜೂನ್ ಅ0ತ್ಯಕ್ಕೆ 2.96 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ ಈಗಾಗಲೇ 3.26 ಲಕ್ಷ ಮಾನವ ದಿನಗಳನ್ನು ಸೃಜಿಸಿ 107.95 ಸಾಧನೆ ಮಾಡುವುದರ ಮೂಲಕ ಗುರಿ ಮೀರಿ ಸಾಧನೆ ಮಾಡುವತ್ತ ದಾಪುಗಾಲು ಇರಿಸಿದೆ. ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.63.20 ರಷ್ಟು ಇದ್ದು, ಇದು ರಾಜ್ಯದಲ್ಲಿ ಗರಿಷ್ಟ ಪ್ರಮಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್.
ಬ್ರಹ್ಮಾವರ ದಲ್ಲಿ ಜೂನ್ ಅಂತ್ಯಕ್ಕೆ 51,481 ಮಾನವ ದಿನ ಸೃಜನೆಯ ಗುರಿ ಇದ್ದು, 65,853 ಮಾನವ ದಿನಗಳನ್ನು ಸೃಜಿಸಿ 127.92 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 198.35 ಲಕ್ಷ ಕೂಲಿ ವೆಚ್ಚ ಹಾಗೂ 11.46 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಬೈಂದೂರು ದಲ್ಲಿ ಜೂನ್ ಅಂತ್ಯಕ್ಕೆ 31,751 ಮಾನವ ದಿನ ಸೃಜನೆಯ ಗುರಿ ಇದ್ದು, 34,190 ಮಾನವ ದಿನಗಳನ್ನು ಸೃಜಿಸಿ 107.68 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 102.11 ಲಕ್ಷ ಕೂಲಿ ವೆಚ್ಚ ಹಾಗೂ 19.36 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಹೆಬ್ರಿಯಲ್ಲಿ ಜೂನ್ ಅಂತ್ಯಕ್ಕೆ 15,997 ಮಾನವ ದಿನ ಸೃಜನೆಯ ಗುರಿ ಇದ್ದು 14,584 ಮಾನವ ದಿನಗಳನ್ನು ಸೃಜಿಸಿ 91.17 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 44.84 ಲಕ್ಷ ಕೂಲಿ ವೆಚ್ಚ ಹಾಗೂ 15.51 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕಾಪುವಿನಲ್ಲಿ ಜೂನ್ ಅಂತ್ಯಕ್ಕೆ 19,709 ಮಾನವ ದಿನ ಸೃಜನೆಯ ಗುರಿ ಇದ್ದು 30,849 ಮಾನವ ದಿನಗಳನ್ನು ಸೃಜಿಸಿ 156.52 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 92.88 ಲಕ್ಷ ಕೂಲಿ ವೆಚ್ಚ ಹಾಗೂ 24.07 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕಾರ್ಕಳದಲ್ಲಿ ಜೂನ್ ಅಂತ್ಯಕ್ಕೆ 40,213 ಮಾನವ ದಿನ ಸೃಜನೆಯ ಗುರಿ ಇದ್ದು 30,724 ಮಾನವ ದಿನಗಳನ್ನು ಸೃಜಿಸಿ 76.40 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 90.15 ಲಕ್ಷ ಕೂಲಿ ವೆಚ್ಚ ಹಾಗೂ 42.91 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕುಂದಾಪುರದಲ್ಲಿ ಜೂನ್ ಅಂತ್ಯಕ್ಕೆ 1,15,424 ಮಾನವ ದಿನ ಸೃಜನೆಯ ಗುರಿ ಇದ್ದು 1,23,811 ಮಾನವದಿನಗಳನ್ನು ಸೃಜಿಸಿ 107.27 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 369.13 ಲಕ್ಷ ಕೂಲಿ ವೆಚ್ಚ ಹಾಗೂ 74.89 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಉಡುಪಿಯಲ್ಲಿ ಜೂನ್ ಅಂತ್ಯಕ್ಕೆ 21,498 ಮಾನವ ದಿನ ಸೃಜನೆಯ ಗುರಿ ಇದ್ದು , 19,613 ಮಾನವ ದಿನಗಳನ್ನು ಸೃಜಿಸಿ 91.23 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 57.89 ಲಕ್ಷ ಕೂಲಿ ವೆಚ್ಚ ಹಾಗೂ 19.58 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಜನರು,ಕೂಲಿ ಕಾರ್ಮಿಕರು,ರೈತರು ಗರಿಷ್ಟ ಪ್ರಮಾಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪ0ಚಾಯತ್, ತಾಲೂಕು ಪ0ಚಾಯತ್ ಅಥವಾ ಅನುಷ್ಟಾನ ಇಲಾಖೆಯ ಕಛೇರಿಗಳನ್ನು ಸಂರ್ಪಕಿಸಬಹುದಾಗಿರುತ್ತದೆ ಅಥವಾ ಉಡುಪಿ ಜಿಲ್ಲಾ ಪಂಚಾಯತ್ ಕಛೇರಿಯ ದೂರವಾಣಿ ಸ0ಖ್ಯೆ-0820 2574945 ನ್ನು ಕಛೇರಿ ವೇಳೆಯಲ್ಲಿ ಸಂರ್ಪಕಿಸಬಹುದಾಗಿದೆ.