Monday, January 20, 2025
Monday, January 20, 2025

ಕೆ.ಎಂ.ಸಿ ಮಣಿಪಾಲ- ಮಧುಮೇಹ ಆರೋಗ್ಯ ಜಾಗೃತಿ

ಕೆ.ಎಂ.ಸಿ ಮಣಿಪಾಲ- ಮಧುಮೇಹ ಆರೋಗ್ಯ ಜಾಗೃತಿ

Date:

ಮಣಿಪಾಲ: ಪ್ರತಿ ವರ್ಷ ನವೆಂಬರ್ 14 ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅಂತಃಸ್ರಾವಶಾಸ್ತ್ರ ವಿಭಾಗದ ನೇತೃತ್ವದಲ್ಲಿ ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಿತು.

ಈ ವರ್ಷದ ಧ್ಯೇಯ ವಾಕ್ಯ “ನಾಳೆಯನ್ನು ರಕ್ಷಿಸಲು ಮದುಮೇಹ ಶಿಕ್ಷಣ”. ವಿಶ್ವ ಮಧುಮೇಹ ದಿನವು ಮಧುಮೇಹವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಜಾಗೃತಿ ಮೂಡಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಇದರ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಾಮೂಹಿಕವಾಗಿ ಮತ್ತು ವೈಯಕ್ತಿಕವಾಗಿ ಏನು ಮಾಡಬೇಕಾಗಿದೆ ಎಂಬುವುದರ ಕುರಿತು ಜಾಗೃತಿ ಮೂಡಿಸುತ್ತದೆ.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಮಧುಮೇಹ, ರಕ್ತದ ಒತ್ತಡ ಮತ್ತು ದೈಹಿಕ ಪರೀಕ್ಷೆಯ ಕಾರ್ಯಕ್ರಮ ಆಯೋಜಿಸಿತ್ತು ಮತ್ತು ಈ ಸಂದರ್ಭದಲ್ಲಿ ‘ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ’ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ 5000 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾದೀಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಅವರು ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಈ ರೋಗವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ ಮತ್ತು ಗಮನಿಸದೆ ಇದ್ದರೆ ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಈ ಕಾರ್ಯಕ್ರಮದ ಮೂಲಕ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಿದೆ. ಇದು ಸಮಾಜಕ್ಕೆ ಉತ್ತಮ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ ಎಂದರು.

ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಮಾಹೆ ಮಣಿಪಾಲದ ಕುಲಪತಿಗಳಾದ ಲೆ. ಜ. ಡಾ ಎಂ ಡಿ ವೆಂಕಟೇಶ್ ಅವರು, ಭಾರತದಲ್ಲಿ ಸುಮಾರು 8 ಕೋಟಿ ಜನರು ಮತ್ತು ವಿಶ್ವದಲ್ಲಿ ಸುಮಾರು 60 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.

ವ್ಯೆದ್ಯ ಲೋಕದಿಂದ ಮಾತ್ರ ಈ ರೋಗವನ್ನು ತಡೆಗಟ್ಟಲು ಸಾಧ್ಯವಿಲ್ಲ, ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಇದನ್ನು ತಪ್ಪಿಸಲು ಅಥವಾ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಉತ್ತಮ ಆರೋಗ್ಯ ದಿನಚರಿಯನ್ನು ಅಭ್ಯಾಸ ಮಾಡಬೇಕು.

ಈ ಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕರಲ್ಲಿ ಈ ರೀತಿಯ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ ಎಂದರು. ಕಾರ್ಯಕ್ರಮದ ಗೌರವ ಅಥಿತಿಗಳಾದ ಡಾ. ಅರುಣ್ ಜಿ ಮಯ್ಯ, ಡೀನ್ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಅವರು ಮಾತನಾಡಿ, ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನಲ್ ಮತ್ತು ಕೆಎಂಸಿ, ಮಣಿಪಾಲವು, ಮಧುಮೇಹ ರೋಗಿಗಳ ಮತ್ತು ಪಾದದ ಬಯೋಮೆಕಾನಿಕಲ್ ವಿಶ್ಲೇಷಣೆಗಾಗಿ ಸರಳವಾದ ಮೂಲಪ್ರತಿಯೊಂದನ್ನು ಅಭಿವೃದ್ಧಿಪಡಿಸಿದೆ.

ಇದು ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಲು ಸಹಾಯ ಮಾಡುತ್ತದೆ ಎಂದರು. ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕುಮಾರ್ ಕೆ ರಾವ್ ಸ್ವಾಗತಿಸಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ವಂದಿಸಿದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು. ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸಹನಾ ಶೆಟ್ಟಿ ಅವರು ಮಧುಮೇಹ ಮತ್ತು ಬೃಹತ್ ಮಧುಮೇಹ ಆರೋಗ್ಯ ಪ್ರದರ್ಶನ ಕುರಿತು ಅವಲೋಕನವನ್ನು ನೀಡಿದರು. ಮಧುಮೇಹ ಕುರಿತ ಪೋಸ್ಟರ್ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!