Thursday, September 19, 2024
Thursday, September 19, 2024

ಅತಿಯಾಸೆಯೇ ಹಣದುಬ್ಬರಕ್ಕೆ ಕಾರಣ: ಎನ್. ಸಂತೋಷ್ ಹೆಗ್ಡೆ

ಅತಿಯಾಸೆಯೇ ಹಣದುಬ್ಬರಕ್ಕೆ ಕಾರಣ: ಎನ್. ಸಂತೋಷ್ ಹೆಗ್ಡೆ

Date:

ವಿದ್ಯಾಗಿರಿ, ಜ.25: ಮನುಷ್ಯರಲ್ಲಿ ತೃಪ್ತಿ ದೂರವಾಗಿ, ಮಾನವೀಯ ಗುಣವೇ ಮರೆಯಾಗುತ್ತಿದೆ. ಕೇವಲ ಹಣ ಮತ್ತು ಅಧಿಕಾರಕ್ಕೆ ಬೆಲೆ ಕೊಡಲಾಗುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣವು ಇಂದಿನ ಅಗತ್ಯವಾಗಿದೆ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಆಳ್ವಾಸ್ ಗಣರಾಜ್ಯೋತ್ಸವದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಾಯಕತ್ವ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಕಾನೂನಿನ ಶ್ರೇಷ್ಠತೆ ಕಾಪಾಡುವುದು ಕೇವಲ ಕೋರ್ಟ್ಗಳ ಕೆಲಸವಲ್ಲ. ಪ್ರತಿ ನಾಗರಿಕನ ಜವಾಬ್ದಾರಿ ಎಂದರು. ನ್ಯಾಯದಾನ ಪ್ರಕ್ರಿಯೆಯು ಬಾಹ್ಯ ಪ್ರಭಾವಿ ಅಂಶಗಳಿಂದ ಮುಕ್ತವಾಗಿರಬೇಕು. ನ್ಯಾಯಾಂಗವು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಆದರೂ ಈಚೆಗೆ ಕೆಲವೊಮ್ಮೆ ವಿಫಲ ಹಾಗೂ ವಿಳಂಬವಾಗಿದೆ ಎಂಬ ಭಾವನೆ ಹಲವರಿಗೆ ಕಾಡಿದೆ. ಇತ್ತ ಅಪರಾಧಗಳೂ ಹೆಚ್ಚುತ್ತಿವೆ ಎಂದರು.

ಭಾರತೀಯರಿಗೆ ಸಂವಿಧಾನವೇ ಆಧಾರ. ಇದು ದೇಶದ ಧ್ಯೇಯೋದ್ದೇಶ ಹಾಗೂ ನಿಲುವುಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು. ದೇಶದ ಪ್ರಗತಿಗೆ ಸಂವಿಧಾನದ ಮೂರು ಅಂಗಗಳಾದ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದ ಜತೆಗೆ ಮಾಧ್ಯಮಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ದುರಾಸೆಗೆ ಈ ಜಗತ್ತಿನಲ್ಲಿ ಔಷಧಿಯಿಲ್ಲ. ಮನುಷ್ಯನ ಅತಿಯಾಸೆಯೇ ಹಣದುಬ್ಬರಕ್ಕೆ ಕಾರಣ. ಸಂಘರ್ಷರಹಿತ ಜೀವನವು ಇಂದಿನ ಅಗತ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಇಲ್ಲಿ ಕೆಲವು ರಾಜಕಾರಣಿಗಳು ತಮ್ಮ ಕರ್ತವ್ಯ ನಿರ್ವಹಿಸುವ ಬದಲಾಗಿ ಪರಸ್ಪರ ದೂಷಿಸಿಕೊಂಡು ಕಾಲಹರಣ ಮಾಡುವುದೇ ಸಮಸ್ಯೆಯಾಗಿದೆ. ಎಲ್ಲ ನಾಗರಿಕರು ಅಭಿಪ್ರಾಯ ನಿರೂಪಕರಾಗಿ ಪರಿವರ್ತನೆಗೊಳ್ಳಬೇಕಾದ ಅನಿವಾರ್ಯ ಎದುರಾಗಿದೆ ಎಂದರು. ವಿದ್ಯಾರ್ಥಿಗಳ ಸಂವಿಧಾನದ ಎಲ್ಲ ಮಾಹಿತಿ ಅವಶ್ಯಕವಾಗಿ ತಿಳಿದುಕೊಂಡಿರಬೇಕು ಎಂದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದರು

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಅಪಾರ. ಭಾರತ ಸಂವಿಧಾನವು ದೇಶವನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ತನ್ನದೇ ಜವಬ್ದಾರಿ ಹೊಂದಿದೆ. ಇವುಗಳ ಕಾರ್ಯವೈಖರಿಯನ್ನು ಸದಾ ಪರೀಕ್ಷಿಸುತ್ತಾ, ಜನರಿಗೆ ಉತ್ತಮವಾದದ್ದು ನಿರೀಕ್ಷಿಸುವಂತೆ ಮಾಡುವುದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮದ ಕಾರ್ಯ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ನಾಯಕತ್ವದ ಕುರಿತು ಉಪನ್ಯಾಸ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಇದ್ದರು.

ವಿದ್ಯಾರ್ಥಿಗಳಾದ ಅಯನಾ, ಅಖಿಲಾ, ಶಶಾಂಕ್, ವೃಂದಾ, ಅಮೃತ, ಸದ್ವಿತಾ ನಿರೂಪಿಸಿದರು. ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳಿಂದ ಆಗಮಿಸಿದ ಪದವಿಪೂರ್ವ ಹಾಗೂ ಪದವಿಯ 1400ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಮ್ಮು ಕಾಶ್ಮೀರ: ಮೊದಲ ಹಂತದ ಮತದಾನ ಮುಕ್ತಾಯ; 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನ

ನವದೆಹಲಿ, ಸೆ.18: ಜಮ್ಮು ಮತ್ತು ಕಾಶ್ಮೀರವು ಕಳೆದ 35 ವರ್ಷಗಳಲ್ಲಿ ಅತಿ...

ಅತಿ ಉದ್ದದ ಮಾನವ ಸರಪಳಿ ನಿರ್ಮಾಣ- ಉಡುಪಿ ಜಿಲ್ಲೆ ಪ್ರಥಮ

ಬೆಂಗಳೂರು, ಸೆ.18: ಮಾನವ ಸರಪಳಿ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ...

ಗ್ರಾಮ ಪಂಚಾಯತ್ ಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ

ಬೆಂಗಳೂರು, ಸೆ.18: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ...

ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ: ಸಾಮಾನ್ಯ ಸಭೆ

ಉಡುಪಿ, ಸೆ.18: ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ...
error: Content is protected !!