Tuesday, November 26, 2024
Tuesday, November 26, 2024

ಫೆ. 25 ರಿಂದ ಮಂಗಳೂರು- ರಾಯಚೂರು ಮಾರ್ಗದಲ್ಲಿ ರಾಜಹಂಸ ಸಾರಿಗೆ ಕಾರ್ಯಾಚರಣೆ

ಫೆ. 25 ರಿಂದ ಮಂಗಳೂರು- ರಾಯಚೂರು ಮಾರ್ಗದಲ್ಲಿ ರಾಜಹಂಸ ಸಾರಿಗೆ ಕಾರ್ಯಾಚರಣೆ

Date:

ಉಡುಪಿ: ಕ.ರಾ.ರ.ಸಾ.ನಿಗಮವು ಮಂಗಳೂರಿನಿಂದ ರಾಯಚೂರಿಗೆ ವಯಾ ಉಡುಪಿ- ಮಣಿಪಾಲ- ಕುಂದಾಪುರ- ಸಿದ್ಧಾಪುರ- ಮಾಸ್ತಿಕಟ್ಟೆ- ನಗರ- ಹೊಸನಗರ- ರಿಪ್ಪನ್‌ಪೇಟೆ- ಆಯನೂರು- ಶಿವಮೊಗ್ಗ- ಹೊನ್ನಾಳಿ- ಹರಿಹರ- ಹರಪನಹಳ್ಳಿ- ಹಗರಿಬೊಮ್ಮನಹಳ್ಳಿ- ಹೊಸಪೇಟೆ- ಗಂಗಾವತಿ- ಸಿಂಧನೂರು- ಮಾನ್ವಿ ಮಾರ್ಗವಾಗಿ ಹೊಸ ರಾಜಹಂಸ ಸಾರಿಗೆ ಕಾರ್ಯಾಚರಣೆಯನ್ನು ಫೆಬ್ರವರಿ 25 ರಿಂದ ಪ್ರಾರಂಭಿಸಲಾಗುತ್ತದೆ.

ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05.30 ಕ್ಕೆ ರಾಯಚೂರು ತಲುಪುತ್ತದೆ. ಮರು ಪ್ರಯಾಣದಲ್ಲಿ ರಾಯಚೂರಿನಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 06.45 ಕ್ಕೆ ಮಂಗಳೂರಿಗೆ ತಲುಪುವುದು.

ಸದರಿ ಸಾರಿಗೆಯಲ್ಲಿ ಮಂಗಳೂರಿನಿಂದ ರಾಯಚೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 850 ರೂ. ಇದ್ದು, ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ www.ksrtc.in ಹತ್ತಿರದ ರಿಸರ್ವೇಶನ್ ಕೌಂಟರ್ ಅಥವಾ ಮಂಗಳೂರು ಬಸ್ ನಿಲ್ದಾಣ: ಮೊ.ನಂ.7760990720, ಉಡುಪಿ ಮೊ.ನಂ: 9663266400, ಕುಂದಾಪುರ ಮೊ.ನಂ: 9663266009, ಶಿವಮೊಗ್ಗ ಮೊ.ನಂ: 7760036866, ರಾಯಚೂರು ಬಸ್ಸು ನಿಲ್ದಾಣ ಮೊ.ನಂ: 7760992370, ರಾಯಚೂರು ಕಂಟ್ರೋಲ್ ರೂಂ: 6366423883, ಹೊಸಪೇಟೆ ಬಸ್ಸು ನಿಲ್ದಾಣ : 08394-228804, ಸಿಂಧನೂರು ಬಸ್ಸು ನಿಲ್ದಾಣ :08335- 220236, ಹರಿಹರ ಬಸ್ಸು ನಿಲ್ದಾಣ ಮೊ.ನಂ: 7760036964, ಗಂಗಾವತಿ ಬಸ್ಸು ನಿಲ್ದಾಣ :08533- 230344, ಮಂಗಳೂರು-02ನೇ ಘಟಕ ಮೊ.ನಂ : 7760990714, ಕಂಟ್ರೋಲ್ ರೂಂ :6366423884 ಹಾಗೂ ಮೊ.ನಂ 7760990728 ಅನ್ನು ಸಂಪರ್ಕಿಸುವಂತೆ ಕ.ರಾ.ರ.ಸಾ.ಸಂ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!