ನೆಹರು ಯುವ ಕೇಂದ್ರ ಉಡುಪಿ, ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆ, ಜೇಸಿಐ ಬೆಳ್ಮಣ್ಣು, ಜೇಸಿಐ ಮೂಲ್ಕಿ ಶಾಂಭವಿ ಇದರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ವರ್ಚುವಲ್ ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ದೊಡ್ಡಣ್ಣಗುಡ್ಡೆ ಡಾ. ಎ. ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆಪ್ತ ಸಮಾಲೋಚಕರಾಗಿರುವ ಸೌಜನ್ಯ ಶೆಟ್ಟಿ ಮಾರ್ಗದರ್ಶನ ನೀಡಿದರು. ಜೇಸಿಐ ವಲಯ 15ರ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಜೇಸಿಐ ವಲಯ 15ರ ಆಡಳಿತ ವಿಭಾಗದ ನಿರ್ದೇಶಕರಾದ ಲೋಕೇಶ್ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಬೆಳ್ಮಣ್ಣು ಘಟಕದ ಅಧ್ಯಕ್ಷರಾದ ಕೃಷ್ಣ ಪವಾರ್ ವಹಿಸಿದ್ದರು. ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆಯ ಅಧ್ಯಕ್ಷರಾದ ಬೋಳ ಉದಯ್ ಅಂಚನ್ ರವರು ಉಪಸ್ಥಿತರಿದ್ದರು.
ಜೇಸಿಐ ಮೂಲ್ಕಿ ಶಾಂಭವಿ ಘಟಕದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಅವರು ಸ್ವಾಗತಿಸಿ ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷ ರು ಮತ್ತು ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ ನಂದಳಿಕೆಯ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ ಪೂಜಾರಿ ವಂದಿಸಿದರು.