Monday, November 25, 2024
Monday, November 25, 2024

ಕೆ.ಎಂ.ಸಿ ಮಣಿಪಾಲ- ಸುಧಾರಿತ ಇಮ್ಯುನೊ ವಿಶ್ಲೇಷಕ ಯಂತ್ರದದ ಉದ್ಘಾಟನೆ

ಕೆ.ಎಂ.ಸಿ ಮಣಿಪಾಲ- ಸುಧಾರಿತ ಇಮ್ಯುನೊ ವಿಶ್ಲೇಷಕ ಯಂತ್ರದದ ಉದ್ಘಾಟನೆ

Date:

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಜೀವರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಸುಧಾರಿತ ಇಮ್ಯುನೊ ವಿಶ್ಲೇಷಕ ಕೋಬಾಸ್ ಇ 801 ಯಂತ್ರವನ್ನು ಉದ್ಘಾಟಿಸಲಾಯಿತು. ಪ್ರಯೋಗಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಧಾರಿತ ಯಂತ್ರವನ್ನು ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್, ಮಣಿಪಾಲದ ಬೋಧನಾ ಆಸ್ಪತೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಮತ್ತು ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಉದ್ಘಾಟಿಸಿದರು .

ರೋಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸುಧಾರಿತ ಕೋಬಾಸ್ ಇ 801 ವಿಶ್ಲೇಷಣಾತ್ಮಕ ಘಟಕವು ಹೆಚ್ಚಿನ ಥ್ರೋಪುಟ್ ಇಮ್ಯುನೊಕೆಮಿಸ್ಟ್ರಿ ಮಾಡ್ಯೂಲ್ ಆಗಿದ್ದು, ಇದು ಹೆಚ್ಚು ನವೀನ ಮತ್ತು ಪೇಟೆಂಟ್ ಪಡೆದ ಎಲೆಕ್ಟ್ರೋ ಕೆಮಿ ಲುಮಿನೆಸೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯಾಪಕ ಶ್ರೇಣಿಯ ವೈವಿಧ್ಯಮಯ ರೋಗನಿರೋಧಕ ಪರೀಕ್ಷೆಗಳನ್ನು ನಿರ್ವಹಿಸುತ್ತದೆ. ಈ ವೇದಿಕೆಯಲ್ಲಿ ಸೀರಮ್, ಮೂತ್ರ ಮತ್ತು ಪ್ಲಾಸ್ಮಾವನ್ನು ಬಳಸಬಹುದು. ಈ ವಿಶ್ಲೇಷಕ (ಯಂತ್ರ)ದ ಥ್ರೋಪುಟ್ ನಲ್ಲಿ ಗಂಟೆಗೆ 300 ಪರೀಕ್ಷೆಗಳನ್ನು ನಿರ್ವಹಿಸಬಹುದು.

ಈ ಯಂತ್ರವು ಸ್ವಯಂಚಾಲಿತ ಕ್ಯಾಸೆಟ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ (ಅಂದರೆ ನೋಂದಣಿ, ಆಂತರಿಕ ಸಾಗಣೆ, ನಿಯೋಜನೆ ಮತ್ತು ವಿಲೇವಾರಿ) ಮತ್ತು ಕಾರ್ಯಾಚರಣೆಯಲ್ಲಿರುವಾಗ ಕಾರಕ ಕ್ಯಾಸೆಟ್‌ಗಳನ್ನು ಸ್ವಯಂಚಾಲಿತವಾಗಿ ಇಳಿಸುವುದು/ಮರುಲೋಡ್ ಮಾಡುವುದು.

ಈ ವಿಶ್ಲೇಷಕ (ಯಂತ್ರ)ದಲ್ಲಿ ನಡೆಸಲಾಗುವ ಪರೀಕ್ಷೆಗಳಾದ ಥೈರಾಯ್ಡ್ ಹಾರ್ಮೋನುಗಳು, ಲೈಂಗಿಕ ಹಾರ್ಮೋನುಗಳು, ಹೃದಯದ ಮಾರ್ಕರ್ ಗಳು , ಗೆಡ್ಡೆಯ ಮಾರ್ಕರ್ ಗಳು ಮತ್ತು ಗರ್ಭಧಾರಣೆಯ ಸಂಬಂಧಿತ ಸ್ಕ್ರೀನಿಂಗ್ ಮಾರ್ಕರ್‌ಗಳು ಇತ್ಯಾದಿಗಳು ರೋಗನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ವಿಶ್ಲೇಷಕದಲ್ಲಿ ಮಾದರಿ ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯವಿರುವ ಸರಾಸರಿ ಸಮಯ 20 ನಿಮಿಷಗಳು.

ಈ ಸಂದರ್ಭದಲ್ಲಿ ಕೆಎಂಸಿ ಸಹ ಡೀನ್ ಡಾ. ಕೃಷ್ಣಾನಂದ ಪ್ರಭು, ರೋಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬ್ಯುಸಿನೆಸ್ ಲೀಡ್ ಡಾ. ಬಿಜೋಯ್ ಬಾಬು, ರಾಷ್ಟ್ರೀಯ ಕೀ ಅಕೌಂಟ್ ಮ್ಯಾನೇಜರ್ ಜಿಜು ಜೋಯ್ ಮತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ ಸ್ವಾಗತಿಸಿ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವರಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!