ಶೃಂಗೇರಿ: ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ ಹಾಗೂ ಆಯುಷ್ ಮಂತ್ರಾಲಯ ಭಾರತ ಸರಕಾರ ಇದರ ಸಹಯೋಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವತಿಯಿಂದ ರೋಗ ಮುಕ್ತ ಭಾರತ ಅಭಿಯಾನದ ಅಂಗವಾಗಿ ಉಚಿತ ಪ್ರಕೃತಿ ಚಿಕಿತ್ಸಾ ಮಾಹಿತಿ ಶಿಬಿರ ಮತ್ತು ಆರೋಗ್ಯ ತಪಾಸಣೆ ತಾಲ್ಲೂಕಿನ ಆಯ್ದ ಸ್ಥಳಗಳಲ್ಲಿ ಆಯೋಜಿಸಲಾಯಿತು.
ವಾನಪ್ರಸ್ಥಾಶ್ರಮ ಕಡೆಮನೆ, ಮೆಟ್ರಿಕ್ ನಂತರದ ಸರಕಾರಿ ಬಾಲಕಿಯರ ವಿದ್ಯಾರ್ಥಿನಿಲಯ, ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯ, ಆಲ್ ಮನೆಜೋ ಸಂಸ್ಥೆ, ಭಾರತೀಯ ಜೀವ ನಿಗಮ ಶಾಖೆ ಹಾಗೂ ರೋಟರಿ ಕ್ಲಬ್ ಶೃಂಗೇರಿ ಇಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಪ್ರಾಣಾಯಾಮ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪನ್ಯಾಸಕ ಹಾಗೂ ವೈದ್ಯಾಧಿಕಾರಿ ಡಾ. ನಿತೇಶ್ ಗೌಡ ಎಂ.ಕೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಸ್ವಸ್ಥಿ ರೈ ಪ್ರಾಣಾಯಾಮ ತರಬೇತಿ ನೀಡಿದರು. ಹರ್ಷಿತ ಆನಂದ್ ರೋಗ ನಿರೋಧಕ ಶಕ್ತಿ ವರ್ಧಿಸುವ ಇಮ್ಯುನಿಟಿ ಕಿಟ್ ವಿತರಿಸಿದರು.
ಸ್ವೀಟಿ ಎಸ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅಂತಿಮ ವರ್ಷದ ಎಂ.ಡಿ. ವಿದ್ಯಾರ್ಥಿ ಡಾ. ವಸಂತ ವಂದಿಸಿದರು.