Tuesday, November 26, 2024
Tuesday, November 26, 2024

ದುಬೈನಲ್ಲಿ ಜಿ.ಎಸ್. ಬಿ ವಿಶ್ವ ಅಂತರರಾಷ್ಟ್ರೀಯ ಸಮ್ಮೇಳನ ಯಶಸ್ವಿ

ದುಬೈನಲ್ಲಿ ಜಿ.ಎಸ್. ಬಿ ವಿಶ್ವ ಅಂತರರಾಷ್ಟ್ರೀಯ ಸಮ್ಮೇಳನ ಯಶಸ್ವಿ

Date:

ಮಂಗಳೂರು, ಮೇ 27: ಗಲ್ಫ್ ರಾಷ್ಟ್ರದಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ನಾಗರಿಕರಿಗಾಗಿಯೇ ದುಬೈನಲ್ಲಿ ಯೂತ್ ಆಫ್ ಜಿ.ಎಸ್.ಬಿ ವಲ್ಡ್ ವೈಡ್ ಸಂಘಟನೆ ಆಯೋಜಿಸಿದ ಪ್ರಪ್ರಥಮ ಜಿ.ಎಸ್.ಬಿ ಇಂಟರ್ ನ್ಯಾಷನಲ್ ಸಮ್ಮೇಳನ ಅರಬ್ ದೇಶದಲ್ಲಿರುವ ಜಿ.ಎಸ್.ಬಿ ಬಾಂಧವರ ನಿರೀಕ್ಷೆ ಮೀರಿ ಯಶಸ್ಸನ್ನು‌ ಕಂಡಿತು. ದುಬೈಯಲ್ಲಿರುವ ವಿಶ್ವಪ್ರಸಿದ್ಧ ಮ್ಯಾರಿಯೇಟ್ ಹೋಟೇಲ್ ನಲ್ಲಿ ವರ್ಣರಂಜಿತವಾಗಿ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ದುಬೈ, ಅಬುಧಾಬಿ, ಶಾರ್ಜಾ ಸಹಿತ ಯುನೈಟೆಡ್ ಅರಬ್ ಎಮಿರೇಟ್ ನ ವಿವಿಧ ಪ್ರದೇಶಗಳಿಂದ ಜಿ.ಎಸ್.ಬಿ ಸಮಾಜದವರು ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದರು.

ಯುಎಇ ರಾಷ್ಟ್ರಗಳ ಸಮಾಜಮುಖಿ ಸಂಘಟನೆಗಳ ಸಹಕಾರದಿಂದ ನಡೆದ ಸಮ್ಮೇಳನ ಅಲ್ಲಿ ನೆಲೆಸಿರುವ ಅನಿವಾಸಿ ಜಿ.ಎಸ್.ಬಿ ಬಾಂಧವರ ಬಹುಕಾಲದ ಕನಸನ್ನು ಈಡೇರಿಸಿ ಅವರಲ್ಲಿ ಸಂತೃಪ್ತಭಾವವನ್ನು ಮೂಡಿಸಿತು. ದಶಕಗಳ ಹಿಂದೆ ಅಲ್ಲಿ ಹೋಗಿ ನೆಲೆಸಿ, ವ್ಯವಹಾರ, ಉದ್ದಿಮೆ, ಉದ್ಯೋಗದಲ್ಲಿ ಉನ್ನತಿಯನ್ನು ಕಾಣುತ್ತಿರುವ ಅನಿವಾಸಿ ಭಾರತೀಯರು ಮತ್ತು ಅವರ ಮುಂದಿನ ಯುವ ತಲೆಮಾರನ್ನು ಸಾಂಸ್ಕೃತಿಕವಾಗಿ ಬೆಸೆಯುವ ಕಾರ್ಯಕ್ರಮದ ಅಂಗವಾಗಿ ನಡೆದ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿರುವ ಕಲೆಯನ್ನು ವೇದಿಕೆಯಲ್ಲಿ ನೃತ್ಯ, ಗಾನದ ಮೂಲಕ‌ ಅಲ್ಲಿನ ಸಂಘಟನೆಗಳ ಪ್ರಮುಖರು ಪ್ರದರ್ಶಿಸಿದರು.

ಅರಬ್ ದೇಶದಲ್ಲಿಯೂ ಸನಾತನ ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಾದರಿ ಕಾರ್ಯದಲ್ಲಿ ತೊಡಗಿಸಿಕೊಂಡು ಭಜನೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವ ಸಂಘಟನೆಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ದುಬೈಯಲ್ಲಿ ಯೂತ್ ಆಫ್ ಜಿಎಸ್ ಬಿ ಚಾನೆಲ್ ಇದರ ಸ್ಟುಡಿಯೋ ಆರಂಭಿಸುವ ಬಗ್ಗೆ ಸಮಾಜದ ಮುಂದಾಳುಗಳ ನೇತೃತ್ವದಲ್ಲಿ ನಿರ್ಧರಿಸಲಾಯಿತು.

ಕಾರ್ಯಕ್ರಮದಲ್ಲಿ ಯುವ ಸಂಘಟಕರುಗಳಾದ ಅರುಣ್ ಪೈ, ಧೀರಜ್ ಪ್ರಭು, ಶ್ರೀನಾಥ್ ಪೈ, ಪ್ರದೀಪ್ ಶೆಣೈ, ಪ್ರಮುಖ ಪ್ರಾಯೋಜಕರಾದ ಆಭರಣ್ ಜ್ಯುವೆಲ್ಲರ್ ಬೆಂಗಳೂರು ಇದರ ಎಂಡಿ‌ ಪ್ರತಾಪ್ ಮಧುಕರ್ ಕಾಮತ್, ಪ್ರೀತಿ ಕಾಮತ್, ಡಿವಿಕೆ ಪ್ರವರ್ತಕರಾದ ವಾಸುದೇವ್ ಕಾಮತ್, ಖ್ಯಾತ ವೈದ್ಯ ಅನಂತ್ ಪೈ, ಹರೀಶ್ ಕಾಮತ್ ದುಬೈ, ಹರೀಶ್ ಶೆಣೈ ದುಬೈ, ಆನಂದ್ ಶಾನುಭೋಗ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಜಿ.ಎಸ್.ಬಿ ಸಮುದಾಯದ ಆಹಾರ ಖಾದ್ಯಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಅತಿಥಿಗಳು ಅದನ್ನು ಸವಿದು ಸಂಘಟಕರನ್ನು ಶ್ಲಾಘಿಸಿದರು. ಮಂಗಳೂರಿನ ಖ್ಯಾತ ಆರ್ಕೆಸ್ಟ್ರಾ ತಂಡದಿಂದ ನಡೆದ ಹಿನ್ನಲೆ ಸಂಗೀತ ಮನಸಿಗೆ ಮುದ ನೀಡಿತು. ಆಭರಣ್ ಜ್ಯುವೆಲ್ಲರ್ ಬೆಂಗಳೂರು, ದೀಪಕ್ ಭಾಸ್ಕರ್ ಶೆಣೈ ವಾಶಿ, ಮಂಗಲ್ಪಾಡಿ ರಾಜೇಶ್ ಶೆಣೈ, ಆರ್ಚ್ ಫಾರ್ಮ್ ಲ್ಯಾಬ್ಸ್ ಅಜಿತ್ ಕಾಮತ್ ಅವರು ಸಮ್ಮೇಳನದ ಪ್ರಾಯೋಜಕತ್ವವನ್ನು ವಹಿಸಿ ದುಬೈಯಲ್ಲಿ ನಡೆದ ಪ್ರಥಮ ಜಿಎಸ್ ಬಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಪ್ರೋತ್ಸಾಹಿಸಿದರು. ಸ್ಥಳೀಯ ಜಿ.ಎಸ್.ಬಿ ಪ್ರತಿಭೆಗಳು ಆಭರಣ್ ಜ್ಯುವೆಲ್ಲರ್ ಬೆಂಗಳೂರು ತಯಾರಿಸಿದ ವಿಶೇಷ ಆಭರಣಗಳನ್ನು ಧರಿಸಿ ಮಾರ್ಜಾಲ ನಡಿಗೆಯ ಮೂಲಕ ಮೆಚ್ಚುಗೆ ಗಳಿಸಿದರು. ಯೂತ್ ಆಫ್ ಜಿ.ಎಸ್.ಬಿ ಕಾರ್ಯಕ್ರಮದ ನೇರಪ್ರಸಾರ ಮಾಡಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!