Monday, January 20, 2025
Monday, January 20, 2025

ಡಿ. 22- ಮಣಿಪಾಲದಲ್ಲಿ ಅಮೃತಾ ರವಿಕಿರಣ ಸಂಗೀತ ಕಛೇರಿ

ಡಿ. 22- ಮಣಿಪಾಲದಲ್ಲಿ ಅಮೃತಾ ರವಿಕಿರಣ ಸಂಗೀತ ಕಛೇರಿ

Date:

ಉಡುಪಿ: ಖ್ಯಾತ ಕಲಾವಿದೆ ಅಮೃತಾ ರವಿಕಿರಣ ಅವರಿಂದ ಜಾನಪದ ಸಂಗೀತ ಕಛೇರಿಯು ಮಣಿಪಾಲದ ಹೋಟೆಲ್ ಮಧುವನ್ ಸೆರಾಯ್‌ನಲ್ಲಿ ಡಿಸೆಂಬರ್ 22 ರಂದು ಸಂಜೆ 6.30 ಕ್ಕೆ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಗಾಯಕರಾಗಿರುವ ಅಮೃತಾ ಅವರು ಪ್ರಸ್ತುತ ಉತ್ತರ ಐರ್ಲೆಂಡ್‌ನಲ್ಲಿ ನೆಲೆಸಿದ್ದಾರೆ.

ಈ ಸಂಗೀತ ಕಾರ್ಯಕ್ರಮವನ್ನು ಸಂಗೀತ ಸಭಾ, ಉಡುಪಿ ಮತ್ತು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ ಜಂಟಿಯಾಗಿ ಆಯೋಜಿಸುತ್ತಿದ್ದು, ಮಣಿಪಾಲದ ಹೋಟೆಲ್ ಮಧುವನ್ ಸೆರಾಯ್ ನ ಮೊದಲ ಮಹಡಿಯಲ್ಲಿರುವ ಮೈತ್ರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಸಭಾದ ಅಧ್ಯಕ್ಷರಾದ ಪ್ರೊ. ರಂಗ ಪೈ ತಿಳಿಸಿದ್ದಾರೆ.

ಕಲಾವಿದೆ ಅಮೃತಾ ರವಿಕಿರಣ ಅವರು ಈ ಹಿಂದೆ ಭಾರತ ಮತ್ತು ಐರ್ಲೆಂಡ್‌ನಲ್ಲಿ, ಬಿಬಿಸಿ ಸೇರಿದಂತೆ ವಿವಿಧ ರೇಡಿಯೋ ಮತ್ತು ದೂರದರ್ಶನ ಚಾನೆಲ್‌ಗಳಿಗಾಗಿ ಪ್ರದರ್ಶನ ನೀಡಿದ್ದಾರೆ. ಉಚಿತ ಪ್ರವೇಶ ಪಾಸ್‌ಗಳಿಗಾಗಿ ಸಂಪರ್ಕಿಸಿ- 9845242110

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!