ಮಣಿಪಾಲ: ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ ಮತ್ತು ಕೆ.ಎಂ.ಸಿ ಮಣಿಪಾಲ ರಕ್ತನಿಧಿ ಕೇಂದ್ರ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ 75 ಯೂನಿಟ್ ರಕ್ತದಾನ ಶಿಬಿರ ಶನಿವಾರ ಕೆ.ಎಂ.ಸಿ ಲೆಕ್ಚಲ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಅಣ್ಣಪ್ಪ ಕುಡ್ವ, ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ. ಒಂದು ಯುನಿಟ್ ರಕ್ತದಿಂದ 3 ಜನರ ಜೀವ ಉಳಿಸಲು ಸಾಧ್ಯ. ವೈದ್ಯಕೀಯ ಪ್ರತಿನಿಧಿಗಳ ಕಾರ್ಯ ಈ ನಿಟ್ಟಿನಲ್ಲಿ ಶ್ಯಾಘನೀಯ ಎಂದರು.
ಅತಿಥಿಗಳಾಗಿ ರಕ್ತನಿಧಿ ವಿಭಾಗದ ಮುಖ್ಯಸ್ತರಾದ ಡಾ. ಶಮ್ಮಿ ಶಾಸ್ತ್ರಿ, ಎಂ.ಎಸ್ ಕಚೇರಿಯ ಡಾ. ಉತ್ತಮ್ ಶರ್ಮಾ, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಉಪಸ್ಥಿತರಿದ್ದರು. ಹಿರಿಯ ವೈದ್ಯಕೀಯ ಪ್ರತಿನಿಧಿ ಮಧುಸೂಧನ್ ಹೇರೂರು ರವರನ್ನು ಗೌರವಿಸಲಾಯಿತು. ಅನಂತ್ ಹೊಳ್ಳ ಪ್ರಾರ್ಥಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.