ಉಡುಪಿ: ಕೆ.ಎಂ.ಸಿ ಮಣಿಪಾಲ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, ಬಿ.ಎಸ್.ಸಿ ಎಮರ್ಜನ್ಸಿ ಮೆಡಿಕಲ್ ಟೆಕ್ನಾಲಜಿ, ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲೆ, ಎಮರ್ಜನ್ಸಿ ಮೆಡಿಸಿನ್ ವಿಭಾಗ, ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್, ಮಣಿಪಾಲ್ ಬರ್ಡಿಂಗ್ ಆಂಡ್ ಕನ್ಸರ್ವೇಶನ್ ಸಂಯುಕ್ತ ಆಶ್ರಯದಲ್ಲಿ ಮಟ್ಟು ಕಡಲ ತೀರದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಯಿತು.
ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್ ಸಂಯೋಜಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್, ಲಾವಣ್ಯ ಬಿ.ಎನ್, ಡಾ. ವೃಂದಾ, ಅರುಂಧತಿ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.